ಗೋಲಿಬಾರ್ ಘಟನೆಗೆ ಖಂಡನೆ : ಮಡಿಕೇರಿಯಲ್ಲಿ ವರ್ತಕರ ಅಂಗಡಿ, ಮುಂಗಟ್ಟು ಬಂದ್
Update: 2019-12-21 22:19 IST
ಮಡಿಕೇರಿ : ಮಂಗಳೂರಿನಲ್ಲಿ ನಡೆದ ಗೋಲಿಬಾರ್ ಪ್ರಕರಣವನ್ನು ಖಂಡಿಸಿ ಮಡಿಕೇರಿ ನಗರದಲ್ಲಿ ವರ್ತಕರು ತಮ್ಮ ಅಂಗಡಿ, ಮುಂಗಟ್ಟುಗಳನ್ನು ಮುಚ್ಚಿ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಬಹುತೇಕ ವರ್ತಕರು ತಮ್ಮ ತಮ್ಮ ಅಂಗಡಿ ಹಾಗೂ ವಾಣಿಜ್ಯ ಮಳಿಗೆಗಳನ್ನು ಸಂಜೆ ಆರು ಗಂಟೆಯವರೆಗೆ ಬಂದ್ ಮಾಡಿದ್ದರು. ಅಲ್ಲದೆ ತಮ್ಮ ಮಳಿಗೆಗಳ ಮೇಲೆ ಸಿಎಎ ಮತ್ತು ಎನ್‍ಆರ್‍ಸಿ ಯನ್ನು ಕೈ ಬಿಡುವಂತೆ ಒತ್ತಾಯಿಸಿದ ಭಿತ್ತಿಪತ್ರಗಳನ್ನು ಅಂಟ್ಟಿಸಿದ್ದರು. ನಗರದಲ್ಲಿ ನಿಷೇಧಾಜ್ಞೆ ಜಾರಿ ಇದ್ದ ಹಿನ್ನೆಲೆ ಆಯಾಕಟ್ಟಿನ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ನಾಪೋಕ್ಲು ಸಮೀಪ ಕಡಂಗ ಗ್ರಾಮದಲ್ಲೂ ಬಂದ್ ಆಚರಿಸಿ ಗೋಲಿಬಾರ್ ಘಟನೆಯನ್ನು ಖಂಡಿಸಲಾಯಿತು.