ಭಾರತ ಎಲ್ಲರಿಗೂ ಸೇರಬೇಕು ಎಂದು ಮಹಾತ್ಮ ಗಾಂಧಿ ಹೇಳಿದ್ದರು : ರಾಜ್ ಮೋಹನ್ ಗಾಂಧಿ
ಮೈಸೂರು, ಡಿ.21: ಸ್ವಾತಂತ್ರ್ಯ ಬಂದ ನಂತರ ಭಾರತ ಹಿಂದೂಗಳಿಗೆ ಸೇರಬೇಕಾ, ಮುಸ್ಲಿಮರೂ ಇರಬೇಕಾ ಎಂದಾಗ, ಈ ಭಾರತ ಎಲ್ಲರಿಗೂ ಸೇರಬೇಕು ಎಂದು ಮಹಾತ್ಮಾ ಗಾಂಧಿ ಹೇಳಿದ್ದರು ಎಂದು ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಮೊಮ್ಮಗ ರಾಜ್ ಮೋಹನ್ ಗಾಂಧಿ ಹೇಳಿದರು.
ಗಾಂಧಿ ವಿಚಾರ ಪರಿಷತ್ತು, ಮೈವಿವಿ ಗಾಂಧಿ ಅಧ್ಯಯನ ಕೇಂದ್ರದ ವತಿಯಿಂದ ಹಮ್ಮಿಕೊಂಡಿರುವ ಎರಡು ದಿನಗಳ “ಮಾಧ್ಯಮ-ಪ್ರಜಾಸತ್ತೆ: ಕುರಿತ ವಿಚಾರ ಸಂಕಿರಣವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. ಇಂದು ಭಾರತ ಹಿಂದೂಗಳದ್ದಾಗಬೇಕು ಎಂದು ಕೆಲವರು ಹೇಳುತಿದ್ದಾರೆ. ಗಾಂಧಿ ಎಲ್ಲರ ಎಲ್ಲರ ಭಾರತ ಎಂದು ಹೇಳಿದ್ದರು. ಅದನ್ನು ನಾವು ಇಂದಿಗೂ ಅನ್ವಯಿಸಿಕೊಳ್ಳಬೇಕು ಎಂದು ಹೇಳಿದರು.
ಸಂವಿಧಾನದಲ್ಲಿ ಅಡಕವಾಗಿರುವ `ಸಮಾನತೆ', 'ಬ್ರಾತೃತ್ವ'ದ ಮೂಲತತ್ವಕ್ಕೆ ಕಳೆದ 15 ವರ್ಷಗಳಿಂದೀಚೆಗೆ ಕೊಡಲಿಪೆಟ್ಟು ಬಿದ್ದಿದ್ದು, ಕೆಲವು ಶಕ್ತಿಗಳು ಭಾರತ ತಮ್ಮ ಕೈವಶದಲ್ಲಿರಬೇಕು ಎಂಬು ಪ್ರಬಲವಾಗಿ ಅಭಿಪ್ರಾಯ ಹೇರಲು ಮುಂದಾಗಿದ್ದು, ಪ್ರಜಾಪ್ರಭುತ್ವದ ಉಳಿವಿಗೆ ಅಂತಹ ಶಕ್ತಿಗಳ ವಿರುದ್ಧ ಹೋರಾಡಬೇಕಿದೆ ಎಂದು ಕರೆ ನೀಡಿದರು.
ಸಮಾನತೆ, ನ್ಯಾಯವನ್ನು ಯಾರು ಪ್ರೀತಿಸುತ್ತಾರೋ ಅವರು ಈ ದಕ್ಷಿಣ ಭಾರತದಲ್ಲಿದ್ದಾರೆ. ದೇಶ ಇಂದು ಎದುರಿಸುತ್ತಿರುವ ಅಭಿಪ್ರಾಯ ಹೇರುವಿಕೆಯ ಸವಾಲಿನ ವಿರುದ್ಧ ಹೋರಾಡಬೇಕು. ದಕ್ಷಿಣ ಭಾರತದ ನಾಯಕತ್ವ ಇಂತಹ ಸವಾಲು ಎದುರಿಸಲು ಶಕ್ತವಾಗಿದೆ. ನಾನು ಗಾಂಧಿ ಮೊಮ್ಮಗನಾಗಿ ಹೇಳುತ್ತಿಲ್ಲ, ನಾನು ರಕ್ತಗತವಾಗಿ ಸಂಭಿದಕನಾಗಿರಬಹುದು. ಆದರೆ ಬಹುತೇಕ ಮಂದಿ ಗಾಂಧಿಯವರ ಸ್ಫೂರ್ತಿಯಿಂದ ಹೋರಾಡುತ್ತಿದ್ದಾರೆ. ಗಾಂಧಿ ಓರ್ವ ಮನುಷ್ಯ, ಅವರು ದೇವರಲ್ಲ. ಪ್ರತಿಯೊಬ್ಬರನ್ನು ಒಂದಾಗಿ ಕಾಣುವುದೇ ಗಾಂಧಿಯವರ ಅಂತಿಮ ಗುರಿಯಾಗಿತ್ತು ಎಂದರು.
ಮಹಾತ್ಮ ಗಾಂಧಿ ಎಂದೂ ತಮ್ಮ ಪ್ರಜ್ಞೆ ಮರೆತವರಲ್ಲ. ರಾಮನನ್ನು ಪ್ರೀತಿಸುತ್ತಿದ್ದನೆ, ನೀವು ರಾಮನನ್ನು ಹೆಸರಿನಲ್ಲಿ ಪ್ರೀತಿಸು ತ್ತೀರಿ ಎಂದಿದ್ದರು. ಇಂದು ವಿಶ್ವ ಮತ್ತು ಭಾರತ ಒಂದೇ ತರದ ಸವಾಲು ಎದುರಿಸುತ್ತಿದೆ. ಜೈ ಹಿಂದ್, ವಂದೇ ಮಾತರಂ, ಹೇ ರಾಮ್ ಎಂಬ ಶಬ್ದಗಳನ್ನು ಒಂದು ವರ್ಗಕ್ಕೆ ಸೀಮಿತವಾಗಿಸಲಾಗುತ್ತಿದೆ. ಯಾರನ್ನು ಹಂಗಿನಲ್ಲಿಟ್ಟುಕೊಳ್ಳಬೇಡಿ, ಹೆದರಿಸಬೇಡಿ, ದಬ್ಬಾಳಿಕೆ ಮಾಡಬೇಡಿ ಎಂಬ ಮಾತನ್ನು ಗಾಂಧಿ ಅಂದೇ ಹೇಳಿದ್ದರು.ಯಾರೂ ಯಾರನ್ನೂ ನಿಯಂತ್ರಿಸುವ ಅವಶ್ಯಕತೆಯಿಲ್ಲ. ಪ್ರತಿಯೊಬ್ಬರಿಗೂ ಸ್ವಾತಂತ್ರ್ಯವಿರಬೇಕು. ಪತ್ರಕರ್ತ ಮತ್ತು ಸಾಮಾನ್ಯ ಜನ ತಾವು ಬದುಕಿರೊವ ಕೊನೆವರೆಗೂ ತಮಗನಿಸಿ ದ್ದನ್ನು ಅಭಿವ್ಯಕ್ತಿಸಬೇಕು ಎಂದು ರಾಜ್ ಮೋಹನ್ ಗಾಂಧಿ ಹೇಳಿದರು.
ಮಹಾತ್ಮ ಗಾಂಧಿ 1903 ರಿಂದ 1948 ರವರೆಗೂ ಪತ್ರಕರ್ತರಾಗಿದ್ದರು. ಹುಟ್ಟಿದಾಗಿನಿಂದ ಸ್ವಾತಂತ್ರ್ಯ ಹೋರಾಟಗಾರರಲ್ಲ. `ಹರಿಜನ', `ಯಂಗ್ ಇಂಡಿಯಾ' ಪತ್ರಿಕೆಗಳನ್ನು ತಂದು ಅನಿಸಿದ್ದನ್ನು ಅಭಿವ್ಯಕ್ತಿಸಿದರು. ಸತ್ಯಾಗ್ರಹ ಆರಂಭಿಸಿದ ನೆಹರು, ವಿನೋದಾಬಾವೆ ಸೇರಿಕೊಂಡರು. ಸ್ವಾತಂತ್ರ್ಯ ಬಂದ ನಂತರ ಭಾರತ ಹಿಂದೂಗ ಸೇರಬೇಕಾ, ಮುಸ್ಲಿಮರೂ ಇರಬೇಕಾ ಎಂದಾಗ ಗಾಂಧಿ ಹೇಳಿದ್ದು, ಈ ಭಾರತ ಎಲ್ಲರಿಗೂ ಸೇರಬೇಕು ಎಂದಿದ್ದರು. ಅದನ್ನು ನಾವು ಇಂದಿಗೂ ಅನ್ವಯಿಸಿಕೊಳ್ಳಬೇಕು ಎಂದು ಹೇಳಿದರು.
ಗಾಂಧಿ ವಿಚಾರ ಪರಿಷತ್ತು ಅಧ್ಯಕ್ಷ ಪ. ಮಲ್ಲೇಶ್ ಅಧ್ಯಕ್ಷತೆ ವಹಿಸಿದ್ದರು. ಗೌರವ ಉಪಾಧ್ಯಕ್ಷ ಡಾ.ಎಚ್.ಸಿ. ಮಹದೇವಪ್ಪ, ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತ್‍ಕುಮಾರ್, ಕುಲಸಚಿವ ಪ್ರೊ.ಆರ್. ಶಿವಪ್ಪ, ಗಾಂಧಿ ಭವನ ನಿರ್ದೇಶಕ ಪ್ರೊ.ಎಂ.ಎಸ್. ಶೇಖರ್, ಪರಿಷತ್ತಿನ ಕಾರ್ಯದರ್ಶಿ ಸಂಸ್ಕೃತಿ ಸುಬ್ರಹ್ಮಣ್ಯ ಇದ್ದರು.
ಭಾರತೀಯರು ಪೌರತ್ವ ಕಾಯ್ದೆಯನ್ನು ವಿರೋಧಿಸಬೇಕು
ಕೇಂದ್ರ ಸರ್ಕಾರ ಜಾರಿಗೊಳಿಸಲು ಹೊರಟಿರುವ ಪೌರತ್ವ ತಿದ್ದುಪಡಿ ಕಾಯ್ದೆ ಅಸಂವಿಧಾನಿಕವಾದದು. ಸಾಮಾನ್ಯ ಭಾರತೀಯ ತಾನು ಭಾರತೀಯನೆಂದು ಸಾಬೀತುಪಡಿಸಬೇಕೆನ್ನುವುದು ನಮಗೆಲ್ಲರಿಗೂ ನಾಚಿಕೆಯ ಸಂಗತಿಯಾಗಿದೆ ಎಂದು ರಾಜ್ ಮೋಹನ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.
1907-08 ರಲ್ಲಿ ಗಾಂಧಿ ಸತ್ಯಾಗ್ರಹ ಕೈಗೊಂಡಿದ್ದೆ ಅಂದಿನ ಪೌರತ್ವ ನೋಂದಣಿ ಆದೇಶದ ವಿರುದ್ಧ. ನಿಜಕ್ಕೂ ಸಾಮಾನ್ಯ ಜನರು ತಾವು ಭಾರತೀಯರೆಂದು ಸಾಬೀತುಪಡಿಸಬೇಕಾಗಿರುವುದು ದುರಾದೃಷ್ಟಕರ, ಇದರಿಂದ ಜನರು ಅಸಂತೋಷಿಯಾಗಿ ದ್ದಾರೆ. ನಾಲ್ಕು ವರ್ಷಗಳಿಂದ ಅಸ್ಸಾಂ ಜನರು ಭಾರತೀಯನೆಂದು ಸಾಬೀತುಪಡಿಸಲು ತ್ರಾಸಪಡುತ್ತಿದ್ದಾರೆ. ಇದಕ್ಕಾಗಿ ಹಣ, ಆಸ್ತಿ ಕಳೆದುಕೊಂಡಿದ್ದಾರೆ. ಇದೊಂತರ ಭಾರತೀಯರ ಮೇಲೆ ದೌರ್ಜನ್ಯ ಎಸಗುವಂತಾಗಿದೆ. ಜನರ ಸ್ವಾತಂತ್ರ್ಯದ ವಿರುದ್ಧ ಅಸಂವಿಧಾನಿಕ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ನನ್ನ ಮಾತು ಕೇಳಿಸಿಕೊಳ್ಳಲು ಸಿದ್ಧರಿಲ್ಲ, ಅದೇ ರೀತಿ ನಾನೂ ಕೂಡ ಅವರಿಗೆ ಏನನ್ನು ಹೇಳಲ್ಲ. ನಾನು ಭಾರತೀಯರ ಜನರಿಗೆ ಹೇಳುತ್ತೇನೆ. ಭಾರತೀಯರು ತಮ್ಮ ಹಕ್ಕುಗಳ ರಕ್ಷಣೆ, ಪ್ರಭುತ್ವದ ವಿರುದ್ಧದ ವಿಮರ್ಶೆ ಮಾಡುವ ಹಕ್ಕು, ಒಕ್ಕೂಟ ವ್ಯವಸ್ಥೆ ಉಳಿಸಲು ಮುಂದಾಗಬೇಕು. ಯಾವುದೇ ಸರ್ಕಾರ ಈ ವಿಚಾರದಲ್ಲಿ ಮೂಗು ತೂರಿಸಬಾರದು. ಇದರಿಂದ ಗುರಿ ಸಾಧಿಸುವುದೂ ಕಷ್ಟವಾಗುತ್ತದೆ. ಭಾರತೀಯರು ಈಗಿನಿಂದಲೇ ಕಾಯಿದೆ ವಿರೋಧಿಸಬೇಕು ಎಂದು ಕರೆ ನೀಡಿದರು.
ಮಾಧ್ಯಮ ರಂಗ ಮಾರಾಟವಾಗಿದೆ
ಸ್ವಾತಂತ್ರ್ಯ ಚಳವಳಿ ಮತ್ತು ತುರ್ತು ಪರಿಸ್ಥಿತಿ ವೇಳೆ ಬಹಳ ಗಂಭೀರವಾಗಿ ನಡೆದುಕೊಂಡಿದ್ದ ಪತ್ರಿಕಾ ಮಾಧ್ಯಮ ಇಂದು ಕಾರ್ಪೊರೆಟ್ ಕುಳಗಳಿಗೆ ಮಾರಾಟವಾಗಿದೆ. ಅಂದು ಸಂಪಾದಕರನ್ನು ನೋಡಿ ಪತ್ರಿಕೆ ತರಿಸುತ್ತಿದ್ದೆವು. ಇಂದು ಪತ್ರಿಕೆಗಳ ಸಂಪಾದಕರೇ ಯಾರೆಂಬುದು ಗೊತ್ತಾಗುತ್ತಿಲ್ಲ. ಆ ಪತ್ರಿಕೆಯ ಮಾಲೀಕರಷ್ಟೇ ಗೊತ್ತಾಗುತ್ತಾರೆ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಳಿ ತಪ್ಪಿದರೆ ತಿದ್ದಲು ಪತ್ರಿಕಾಂಗ ಇತ್ತು. ಈಗ ಆ ಭರವಸೆಯೂ ಹೋಗಿದೆ
- ಪ. ಮಲ್ಲೇಶ್, ಹಿರಿಯ ಸಮಾಜವಾದಿ