ಬಾಂಗ್ಲಾ: ಉಸಿರಾಟದ ಸೋಂಕಿಗೆ 16 ಬಲಿ

Update: 2019-12-22 17:55 GMT

ಢಾಕಾ,ಡಿ.22: ಕಳೆದ ಎರಡು ತಿಂಗಳುಗಳಲ್ಲಿ ಬಾಂಗ್ಲಾದಲ್ಲಿ ಒಟ್ಟು 16 ಮಂದಿ ತೀವ್ರ ಉಸಿರಾಟದ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ರವಿವಾರ ತಿಳಿಸಿದ್ದಾರೆ.

ಚಿತ್ತಗಾಂಗ್ ಜಿಲ್ಲೆಯಲ್ಲಿ ಉಸಿರಾಟದ ಸೋಂಕಿನ ಕಾಯಿಲೆಯಿಂದಾಗಿ 11 ಮಂದಿ ಸಾವಿಗೀಡಾಗಿದ್ದು, ಇದು ಉಳಿದ ಜಿಲ್ಲೆಗಳಿಗಿಂತ ಗರಿಷ್ಠವಾಗಿದೆ.

‘‘ನವೆಂಬರ್ 1ರಿಂದ ಡಿಸೆಂಬರ್ 20ರವರೆಗೆ ಬಾಂಗ್ಲಾದೇಶದಾದ್ಯಂತ 16 ಮಂದಿ ತೀವ್ರವಾದ ಉಸಿರಾಟದ ಸೋಂಕಿನಿಂದ ಕೊನೆಯುಸಿರೆಳೆದಿದ್ದಾರೆ’’ ಎಂದು ಆರೋಗ್ಯ ಸೇವೆಗಳ ಮಹಾನಿರ್ದೇಶಕರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಉಸಿರಾಟದ ಸೋಂಕಿನಿಂದಾಗಿ ಮೃತಪಟ್ಟವರ ಸಂಖ್ಯೆಯು ಏರಿಕೆಯಾಗಿ ರುವುದರಿಂದ ಜನರಲ್ಲಿ ಈ ಮಾರಣಾಂತಿಕ ಕಾಯಿಲೆಯ ಬಗ್ಗೆ ಅರಿವು ಮೂಡಿಸಲು ಸರಕಾರವು ಕ್ರಮಗಳನ್ನು ಕೈಗೊಂಡಿದೆಯೆಂದು ಅವರು ಹೇಳಿದ್ದಾರೆ.

 ತೀವ್ರವಾದ ಉಸಿರಾಟದ ತೊಂದರೆಯು ವೈರಸ್‌ನಿಂದ ಹರಡುವ ಕಾಯಿಲೆಯಾಗಿದೆ. ಆರಂಭದಲ್ಲಿ ಮೂಗು, ಶ್ವಾಸನಾಳ ಅಥವಾ ಶ್ವಾಸಕೋಶಗನ್ನು ಈ ವೈರಸ್ ಆಕ್ರಮಿಸಿಕೊಳ್ಳುತ್ತದೆ. ಒಂದು ವೇಳೆ ಈ ಕಾಯಿಲೆಗೆ ಸೂಕ್ತ ಚಿಕಿತ್ಸೆ ನೀಡದೆ ಇದ್ದಲ್ಲಿ ಅದು ಮಾನವದೇಹದ ಇಡೀ ಉಸಿರಾಟ ವ್ಯವಸ್ಥೆಗೆ ಹರಡಿ, ಪ್ರಾಣಾಪಾಯವುಂಟು ಮಾಡುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News