ಸಹಜ ಸ್ಥಿತಿಯತ್ತ ಮಂಗಳೂರು

Update: 2019-12-22 18:31 GMT

ಮಂಗಳೂರು ನಗರದಲ್ಲಿ ರವಿವಾರ ಹಗಲು ಹೊತ್ತು ಜನಜೀವನ ಸಹಜ ಸ್ಥಿತಿಯತ್ತ ಮರಳಿದೆ. ಮುಂಜಾನೆ 6ರಿಂದ ಸಂಜೆ 6ರವರೆಗೆ ಕರ್ಫ್ಯೂ ಸಡಿಲಿಸಿದ ಕಾರಣ ಅಂಗಡಿ-ಮುಂಗಟ್ಟುಗಳು ಎಂದಿನಂತೆ ತೆರೆಯಲ್ಪಟ್ಟಿದ್ದವು. ಸಿಟಿ ಬಸ್ಸುಗಳು ಮತ್ತು ಆಟೊ ರಿಕ್ಷಾಗಳ ಓಡಾಟ ಸಹಜವಾಗಿತ್ತು.
ವಾಹನಗಳ ಹಾಗೂ ಜನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿದ್ದ ರಸ್ತೆಗಳಲ್ಲಿ ರವಿವಾರ ವಾಹನ ಸಂಚಾರ, ಜನ ಸಂಚಾರ ಕಂಡು ಬಂತು. ಈ ನಡುವೆ ಹಾಲು, ಆಹಾರ ಸಹಿತ ಅಗತ್ಯ ಸಾಮಗ್ರಿಗಳನ್ನು ಖರೀದಿಸಲು ಬೆಳಗ್ಗೆಯಿಂದ ಜನರು ಮುಗಿಬಿದ್ದಿದ್ದರು. ಪೆಟ್ರೋಲ್ ಬಂಕ್‌ಗಳ ಮುಂದೆಯೂ ಇಂಧನ ತುಂಬಿಸಲು ವಾಹನಗಳು ಸಾಲುಗಟ್ಟಿ ನಿಂತಿರುವ ದೃಶ್ಯಗಳು ಅಲ್ಲಲ್ಲಿ ಕಂಡುಬಂದಿದ್ದವು. ನಗರದ ಸೆಂಟ್ರಲ್ ಮಾರ್ಕೆಟ್, ಕಂಕನಾಡಿ, ಉರ್ವ, ಕದ್ರಿ ಮಾರುಕಟ್ಟೆ, ಬಂದರ್ ದಕ್ಕೆಯಲ್ಲಿ ವ್ಯಾಪಾರ ವಹಿವಾಟು ಎಂದಿನಂತಿದ್ದು, ಜನರು ಅಗತ್ಯ ವಸ್ತುಗಳ ಖರೀದಿಯಲ್ಲಿ ನಿರತರಾಗಿದ್ದರು. ನಗರದ ಪುರಭವನದ ಬಳಿಯ ರವಿವಾರದ ಸಂತೆಯಲ್ಲೂ ಬಿರುಸಿನ ವ್ಯಾಪಾರವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor