ರಾಜ್ಯದ ಶಾಲೆಗಳಲ್ಲಿ ಇನ್ನು 'ನೀರಿನ ಬೆಲ್': ಆದೇಶ ಹೊರಡಿಸಿದ ಸರಕಾರ

Update: 2019-12-23 12:19 GMT

ಬೆಂಗಳೂರು, ಡಿ.23: ರಾಜ್ಯದ ಎಲ್ಲ ಶಾಲೆಗಳಲ್ಲಿಯೂ ಇನ್ನು ಮುಂದೆ ವಿದ್ಯಾರ್ಥಿಗಳಿಗೆ ಬೆಳಗ್ಗೆ ಮತ್ತು ಮಧ್ಯಾಹ್ನ ಕಡ್ಡಾಯವಾಗಿ ನೀರಿನ ವಿರಾಮ(ವಾಟರ್ ಬೆಲ್) ಕೊಡಬೇಕು ಎಂದು ರಾಜ್ಯ ಸರಕಾರ ಸೋಮವಾರ ಮಹತ್ವದ ಆದೇಶ ನೀಡಿದೆ. 

ಸರಕಾರದ ಈ ಆದೇಶದ ಪ್ರಕಾರ ರಾಜ್ಯದ ಪ್ರತಿ ಶಾಲೆಗಳ ವಿದ್ಯಾರ್ಥಿಗಳು ನೀರು ಕುಡಿಯಲು ಬೆಳಗ್ಗೆ ಮತ್ತು ಮಧ್ಯಾಹ್ನ 10 ನಿಮಿಷಗಳ ವಿರಾಮ ಪಡೆಯಲಿದ್ದಾರೆ. ಸರಕಾರದ ಈ ಹೊಸ ಆದೇಶವು ಪ್ರತಿ ಜಿಲ್ಲೆಗಳಿಗೂ ರವಾನೆಯಾಗಿದ್ದು, ಶಾಲೆಗಳಲ್ಲಿ ಬೆಳಗ್ಗಿನ ಎರಡು ಮತ್ತು ಮೂರನೇ ತರಗತಿಗಳ (ಪೀರಿಯಡ್) ನಡುವೆ ಮತ್ತು ಮಧ್ಯಾಹ್ನದ 3 ಮತ್ತು 4ನೆ ತರಗತಿಗಳ ನಡುವೆ ನೀರು ಕುಡಿಯಲು ಅವಕಾಶ ನೀಡಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News