×
Ad

ಆಯ್ದ ವಿಡಿಯೊಗಳನ್ನು ಸೋರಿಕೆ ಮಾಡಿ ಪೊಲೀಸರು ತನಿಖೆಯ ದಾರಿ ತಪ್ಪಿಸುತ್ತಿದ್ದಾರೆ: ಸಿದ್ದರಾಮಯ್ಯ

Update: 2019-12-24 23:17 IST

ಬೆಂಗಳೂರು, ಡಿ.24: 'ಮಂಗಳೂರು ಗಲಭೆಯ ತಪ್ಪಿತಸ್ಥರು ಯಾರೇ ಇರಲಿ, ತನಿಖೆ ನಡೆಸಿ ಅವರನ್ನು ಶಿಕ್ಷೆಗೊಳಪಡಿಸಬೇಕು. ಆದರೆ ಆಯ್ದ ವಿಡಿಯೋಗಳನ್ನು ಲೀಕ್ ಮಾಡಿ ಅದರ ಮೂಲಕ ಒಂದು ಧರ್ಮದ ಜನರ ಮೇಲೆ ಗೂಬೆ ಕೂರಿಸುವ ಪ್ರಯತ್ನ ಸಲ್ಲದು. ಶಾಂತಿ -ಸೌಹಾರ್ದ ಕಾಪಾಡಬೇಕಾಗಿರುವ ಪೊಲೀಸರೇ ಸೌಹಾರ್ದ ಕೆಡಿಸುವ ಕೆಲಸ ಮಾಡುತ್ತಿರುವುದು ಸರಿ ಅಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಮಂಗಳೂರು ಗಲಭೆಯ ಆಯ್ದ ವಿಡಿಯೋಗಳನ್ನು ಪೊಲೀಸರು ಸೋರಿಕೆ ಮಾಡಿ, ತನಿಖೆಯ ದಾರಿತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ತಮ್ಮಲ್ಲಿರುವ ಸಾಕ್ಷ್ಯಗಳನ್ನು ಮೊದಲು ತನಿಖಾಧಿಕಾರಿಗಳಿಗೆ ಒಪ್ಪಿಸಬೇಕಿತ್ತು. ಈ ಕಾರಣಕ್ಕಾಗಿಯೇ ಸಿಐಡಿ ತನಿಖೆ ಒಂದು ನಾಟಕ, ಅದರ ಬದಲಿಗೆ ನ್ಯಾಯಾಂಗ ತನಿಖೆ‌ ಮಾಡಿ‌ ಎಂದು ಒತ್ತಾಯಿಸಿದ್ದು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News