×
Ad

ಬೆಳಗಾವಿ ಸ್ಮಾರ್ಟ್ ಸಿಟಿಗೆ ರಾಷ್ಟ್ರೀಯ ಪ್ರಶಸ್ತಿ

Update: 2019-12-25 23:56 IST

ಬೆಳಗಾವಿ, ಡಿ.25: ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆ ಜಾರಿಗೊಳಿಸಿರುವ ‘ಎಜುಕೇಶನ್ ಪ್ರೊಜೆಕ್ಟ್’ಗೆ ರಾಷ್ಟ್ರಮಟ್ಟದಲ್ಲಿ ಬೆಸ್ಟ್ ಸ್ಮಾರ್ಟ್ ಎಜುಕೇಶನ್ ಪ್ರೊಜೆಕ್ಟ್ ಪ್ರಶಸ್ತಿ ಲಭಿಸಿದೆ ಎಂದು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಶಿಧರ ಕುರೇರ ತಿಳಿಸಿದ್ದಾರೆ.

ನ್ಯಾಶನಲ್ ಇನ್ಸ್‌ಟಿಟ್ಯೂಟ್ ಆಫ್ ಅರ್ಬನ್ ಅಫೇರ್ಸ್ ಕೊಡಮಾಡುವ, ಸ್ಮಾರ್ಟ್ ಸಿಟಿ ಎಂಪವರಿಂಗ್ ಇಂಡಿಯಾ ಅವಾರ್ಡ್ಸ್-2019 ಪ್ರಸ್ತುತ ಪಡಿಸುವ ಬೆಸ್ಟ್ ಸ್ಮಾರ್ಟ್ ಎಜುಕೇಶನ್ ಪ್ರೊಜೆಕ್ಟ್ ಅವಾರ್ಡ್ ಬೆಳಗಾವಿ ಸ್ಮಾರ್ಟ್ ಸಿಟಿಯ ಹೈಟೆಕ್ ಕ್ಲಾಸ್ ರೂಂ ಪ್ರೊಜೆಕ್ಟ್‌ಗೆ ಸಿಕ್ಕಿದೆ ಎಂದು ಅವರು ಹೇಳಿದ್ದಾರೆ.

ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವ ಹರಿದೀಪ್ ಸಿಂಗ್ ಪುರಿ ಜನವರಿ 10ರಂದು ಹೊಸದಿಲ್ಲಿಯ ಲಲಿತ್ ಹೊಟೇಲ್‌ನಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಬೆಳಗಾವಿ ಸ್ಮಾರ್ಟ್ ಸಿಟಿಯಿಂದ ಐವರು ಪ್ರತಿನಿಧಿಗಳು ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಲು ಅವಕಾಶವಿದೆ ಎಂದು ಶಶಿಧರ ಕುರೇರ ತಿಳಿಸಿದ್ದಾರೆ.

ಆರಂಭದಲ್ಲಿ ಯೋಜನೆ ಅನುಷ್ಠಾನದಲ್ಲಿ ವಿಳಂಬದಿಂದಾಗಿ ಟೀಕೆಗೆ ಒಳಗಾಗಿದ್ದ ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆಗಳು ಈಗ ವೇಗ ಪಡೆದಿದ್ದು, ಇನ್ನು 6 ತಿಂಗಳಲ್ಲಿ ಮೊದಲ ಹಂತದ ಕಾಮಗಾರಿಗಳು ಸಂಪೂರ್ಣವಾಗಲಿವೆ. ಇದೀಗ ಪ್ರಶಸ್ತಿ ಸಿಕ್ಕಿರುವುದು ಬೆಳಗಾವಿಯ ಹೆಮ್ಮೆಯಾಗಿದೆ ಎಂದು ಅವರು ಪ್ರಕಟಣೆಯಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News