ಮಂಗಳೂರು ಸೇರಿ 11 ಮಹಾನಗರ ಪಾಲಿಕೆಗಳ ಮೇಯರ್-ಉಪಮೇಯರ್ ಸ್ಥಾನಕ್ಕೆ ಮೀಸಲಾತಿ ಪ್ರಕಟ
ಬೆಂಗಳೂರು, ಡಿ. 26: ಮಂಗಳೂರು, ಬೆಂಗಳೂರು, ಬಳ್ಳಾರಿ, ಹುಬ್ಬಳ್ಳಿ-ಧಾರವಾಡ, ಕಲಬುರ್ಗಿ ಸೇರಿದಂತೆ 11 ಮಹಾನಗರ ಪಾಲಿಕೆಗಳ ಮೇಯರ್ ಮತ್ತು ಉಪಮೇಯರ್ ಸ್ಥಾನಕ್ಕೆ ಮೀಸಲಾತಿ ಪ್ರಕಟಿಸಿ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.
ಬಳ್ಳಾರಿ-ಮೇಯರ್(ಎಸ್ಸಿ), ಉಪಮೇಯರ್ (ಎಸ್ಟಿ-ಮಹಿಳೆ), ಬೆಳಗಾವಿ- ಮೇಯರ್(ಎಸ್ಸಿ-ಮಹಿಳೆ), ಉಪಮೇಯರ್ (ಸಾಮಾನ್ಯ), ಬೆಂಗಳೂರು- ಮೇಯರ್ (ಸಾಮಾನ್ಯ), ಉಪಮೇಯರ್ (ಸಾಮಾನ್ಯ), ದಾವಣಗೆರೆ- ಮೇಯರ್ (ಸಾಮಾನ್ಯ), ಉಪಮೇಯರ್ (ಎಸ್ಸಿ-ಮಹಿಳೆ).
ಹುಬ್ಬಳ್ಳಿ-ಧಾರವಾಡ-ಮೇಯರ್(ಸಾಮಾನ್ಯ ಮಹಿಳೆ), ಉಪಮೇಯರ್ (ಸಾಮಾನ್ಯ), ಕಲಬುರ್ಗಿ-ಮೇಯರ್(ಎಸ್ಟಿ), ಉಪಮೇಯರ್ (ಹಿಂ.ವರ್ಗ ‘ಎ’), ಮಂಗಳೂರು-ಮೇಯರ್(ಸಾಮಾನ್ಯ), ಉಪಮೇಯರ್ (ಸಾಮಾನ್ಯ ಮಹಿಳೆ), ಮೈಸೂರು-ಮೇಯರ್(ಹಿಂ.ವರ್ಗ ‘ಎ’-ಮಹಿಳೆ), ಉಪಮೇಯರ್ (ಎಸ್ಸಿ).
ಶಿವಮೊಗ್ಗ-ಮೇಯರ್(ಹಿಂ.ವರ್ಗ ‘ಬಿ’-ಮಹಿಳೆ), ಉಪಮೇಯರ್ (ಸಾಮಾನ್ಯ ಮಹಿಳೆ), ತುಮಕೂರು-ಮೇಯರ್(ಸಾಮಾನ್ಯ ಮಹಿಳೆ), ಉಪಮೇಯರ್ (ಹಿಂ.ವರ್ಗ ‘ಎ’-ಮಹಿಳೆ), ವಿಜಯಪುರ-ಮೇಯರ್(ಹಿಂ.ವರ್ಗ ‘ಎ’), ಉಪಮೇಯರ್ (ಸಾಮಾನ್ಯ ಮಹಿಳೆ).