ಮಡಿಕೇರಿ ಸುತ್ತಮುತ್ತಲ ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದ ಸಿಡಿಲಬ್ಬರ
Update: 2019-12-27 17:41 IST
ಮಡಿಕೇರಿ, ಡಿ.27: ಸೂರ್ಯಗ್ರಹಣ ಸರಿದು ಸಂಜೆ ಆವರಿಸುತ್ತಿದ್ದಂತೆ ಮಡಿಕೇರಿ ಹೊರ ವಲಯದ ಗ್ರಾಮಗಳಲ್ಲಿ ಧಾರಾಕಾರ ಮಳೆಯಾಗಿದೆ. ಆದರೆ ಇದರ ಬೆನ್ನ ಹಿಂದೆಯೇ ತಡರಾತ್ರಿ ಭಾರೀ ಗುಡುಗು, ಸಿಡಿಲು ಕಾಣಿಸಿಕೊಂಡಿದ್ದು, ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.
ಕತ್ತಲು ಆವರಿಸುತ್ತಿದ್ದಂತೆ ಗುಡುಗಿನ ಶಬ್ಧ ಹೆಚ್ಚಾಗುತ್ತಲೇ ಸಾಗಿದೆ. ಈ ನಡುವೆ ರಾತ್ರಿ ಸುಮಾರು 10 ಗಂಟೆ ವೇಳೆ ಕೇಳಿ ಬಂದ ಸಿಡಿಲಬ್ಬರ ಭೂಮಿಯೇ ಬಾಯಿ ಬಿಟ್ಟಂತೆ ಅನುಭವವಾಯಿತು ಎಂದು ಕಾಟಿಕೇರಿ, ತಾಳತ್ತಮನೆ, ಉಡೋತ್ ಮುಂತಾದ ಭಾಗಗಳ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.