ಗಲಭೆಕೋರರ ಆಸ್ತಿ ಜಪ್ತಿ: ಬಿಜೆಪಿ ನಾಯಕರ ಮೇಲೂ ಕ್ರಮ ಕೈಗೊಳ್ಳುತ್ತೀರಾ- ಸಿದ್ದರಾಮಯ್ಯ ಪ್ರಶ್ನೆ
Update: 2019-12-27 22:13 IST
ಬೆಂಗಳೂರು, ಡಿ.27: ರಾಜ್ಯದ ಬಿಜೆಪಿ ಸರಕಾರ ಗಲಭೆಕೋರರ ಆಸ್ತಿಯನ್ನು ಮುಟ್ಟುಗೋಲು ಹಾಕಲು ಚಿಂತನೆ ನಡೆಸಿದೆಯಂತೆ. ಇದನ್ನು ಪೂರ್ವಾನ್ವಯವಾಗಿ ಜಾರಿಗೊಳಿಸಿ ಹಿಂದಿನ ಗಲಭೆಗಳಲ್ಲಿ ಆರೋಪಿಗಳಾಗಿರುವ ಬಿಜೆಪಿ ನಾಯಕರ ಮೇಲೂ ಕ್ರಮ ಕೈಗೊಳ್ಳಲು ಸರಕಾರ ಸಿದ್ಧ ಇದೆಯೇ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ.