ಡಿಸಿಎಂ ಹುದ್ದೆ ಬಗ್ಗೆ ಮಾತನಾಡದಂತೆ ಬಿಜೆಪಿ ರಾಜ್ಯಾಧ್ಯಕ್ಷ ನೋಟಿಸ್ ನೀಡಿದ್ದಾರೆ: ಶಾಸಕ ಯತ್ನಾಳ್

Update: 2019-12-27 16:53 GMT

ಬೆಂಗಳೂರು, ಡಿ. 27: ‘ನನಗೆ ಯೋಗ್ಯತೆ ಇದ್ದರೆ ಸಚಿವ ಸ್ಥಾನ ನೀಡಲಿ, ಇಲ್ಲದೆ ಇದ್ದರೆ ನಾನು ಶಾಸಕನಾಗಿಯೇ ಇರುತ್ತೇನೆ’ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇಂದಿಲ್ಲಿ ತಿಳಿಸಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಹುದ್ದೆ ಬಗ್ಗೆ ಮಾತನಾಡದಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನನಗೆ ನೋಟಿಸ್ ನೀಡಿದ್ದು, ಆ ಕುರಿತು ಪ್ರತಿಕ್ರಿಯೆ ನೀಡುವುದಿಲ್ಲ. ಆದರೆ, ಉಪಮುಖ್ಯಮಂತ್ರಿ ಹುದ್ದೆಯೇ ಬೇಡ ಎಂದು ಮೊದಲು ಹೇಳಿದ್ದೆ ನಾನು. ನನಗೆ ಪಕ್ಷ ನೋಟಿಸ್ ನೀಡಿರುವುದಕ್ಕೆ ನಾನು ಯಾವುದೇ ಕಾರಣಕ್ಕೂ ಭಯ ಬೀಳುವುದಿಲ್ಲ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಇದೇ ಸಂದರ್ಭದಲ್ಲಿ ಸ್ಪಷ್ಟನೆ ನೀಡಿದರು.

ಸಿಎಂ ಕ್ರಮ ಸರಿ: ಮಂಗಳೂರು ಗೋಲಿಬಾರ್‌ನಲ್ಲಿ ಪರಿಹಾರ ಘೋಷಿಸಿ ಬಳಿಕ ವಾಪಸ್ ಪಡೆದ ಕ್ರಮ ಸರಿಯಾಗಿದೆ. ದೇಶವನ್ನೇ ಅಪಮಾನಿಸುವ ಪ್ರತಿಭಟನೆ ಹತ್ತಿಕ್ಕಬೇಕು. ಕಾಂಗ್ರೆಸ್-ಜೆಡಿಎಸ್‌ನವರಿಗೆ ದೇಶದ ಹಿತರಕ್ಷಣೆ ಅಗತ್ಯವಿಲ್ಲವೇ ಎಂದು ಅವರು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News