ನಾಲ್ವರು ರಂಗಾಯಣ ನಿರ್ದೇಶಕರ ನೇಮಕ
Update: 2019-12-27 23:33 IST
ಬೆಂಗಳೂರು, ಡಿ.27: ಮೈಸೂರು ಸೇರಿದಂತೆ ರಾಜ್ಯದ ನಾಲ್ಕು ರಂಗಾಯಣಗಳ ನಿರ್ದೇಶಕರನ್ನು ನೇಮಿಸಿ, ರಾಜ್ಯ ಸರಕಾರ ಶುಕ್ರವಾರ ಆದೇಶ ಹೊರಡಿಸಿದೆ.
ಮೈಸೂರು ರಂಗಾಯಣ-ಎ.ಕಾರ್ಯಪ್ಪ, ಶಿವಮೊಗ್ಗ ರಂಗಾಯಣ-ಸಂದೇಶ ಜವಳಿ, ಧಾರವಾಡ ರಂಗಾಯಣ-ರಮೇಶ್ ಪರವಿನಾಯ್ಕರ್ ಹಾಗೂ ಕಲಬುರ್ಗಿ ರಂಗಾಯಣ ನಿರ್ದೇಶಕರಾಗಿ ಪ್ರಭಾಕರ್ ಜೋಷಿ ಅವರನ್ನು ನೇಮಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.