ಬಿಜೆಪಿ ಕಾರ್ಯಕರ್ತನಿಗೆ ರಂಗಾಯಣ ನಿರ್ದೇಶಕ ಸ್ಥಾನ ನೀಡಿದ ರಾಜ್ಯ ಸರಕಾರ: ಆರೋಪ

Update: 2019-12-28 15:31 GMT

ಧಾರವಾಡ, ಡಿ.28: ಮೈಸೂರು ಸೇರಿದಂತೆ ನಾಲ್ಕು ರಂಗಾಯಣಗಳ ನಿರ್ದೇಶಕರನ್ನು ರಾಜ್ಯ ಸರಕಾರ ನೇಮಿಸಿದ ಬೆನ್ನಲ್ಲೇ ವಿವಾದ ಉಂಟಾಗಿದ್ದು, ಇದರಲ್ಲಿ ಬಿಜೆಪಿ ಕಾರ್ಯಕರ್ತನೋರ್ವನಿಗೆ ಪಟ್ಟ ಕಟ್ಟಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ.

ಬಿಜೆಪಿ ಕಾರ್ಯಕರ್ತನೂ ಆಗಿರುವ ಜಿ.ಪಂ. ಮಾಜಿ ಸದಸ್ಯ, ಸ್ವಚ್ಛ ಭಾರತ ಅಭಿಯಾನ ಯೋಜನೆ ಬಿಂಬಿಸುವ ಗಾಂಧೀಜಿ ಕನಸು ಹಾಗೂ ನಮೋ ಭಾರತ ಎಂಬ ಸಿನೆಮಾ ನಿರ್ಮಿಸಿರುವ ರಮೇಶ ಪರವಿನಾಯ್ಕರ್ ಅವರನ್ನು ಧಾರವಾಡ ರಂಗಾಯಣ ನೂತನ ನಿರ್ದೇಶಕರನ್ನಾಗಿ ನೇಮಿಸಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.

ರಂಗ ಚಟುವಟಿಕೆಗಳಲ್ಲಿ ಹೇಳಿಕೊಳ್ಳುವಂತೆ ಸಕ್ರಿಯವಾಗಿ ತೊಡಗಿರದ ಕಾರಣಕ್ಕೆ ಸ್ಥಳೀಯ ರಂಗಕರ್ಮಿಗಳು ಅಸಮಾಧಾನ ಹೊರ ಹಾಕಿದ್ದಾರೆ. ಅಷ್ಟೇ ಅಲ್ಲದೆ, ರಂಗ ಸಮಾಜದ ವತಿಯಿಂದ ಮೂವರು ಹೆಸರುಗಳನ್ನು ಸರಕಾರಕ್ಕೆ ಶಿಫಾರಸು ಮಾಡಲಾಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News