ಮಹಿಳೆ ಸಾವು ಪ್ರಕರಣ: ಆರೋಪಿಗೆ ಕಾರಾಗೃಹ ಶಿಕ್ಷೆ ವಿಧಿಸಿದ ಕೋರ್ಟ್
Update: 2019-12-28 22:13 IST
ಕಲಬುರಗಿ, ಡಿ.28: ಪಿಕ್ ಅಪ್ ಜೀಪ್ ಅನ್ನು ನಿರ್ಲಕ್ಷ್ಯದಿಂದ ಚಲಾಯಿಸಿ ಮಹಿಳೆಯೊಬ್ಬರ ಸಾವಿಗೆ ಕಾರಣನಾಗಿದ್ದ ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ಯಲೋರಿ ಗ್ರಾಮದ ಪ್ರೇಮನಾಥ್ ಗಂಜಿಟೆ ಎಂಬಾತನಿಗೆ ಕಲಬುರಗಿ 5ನೆ ಹೆಚ್ಚುವರಿ ಜೆಎಂಎಫ್ ಕೋರ್ಟ್ ಆರು ತಿಂಗಳ ಸಾದಾ ಕಾರಾಗೃಹ ಶಿಕ್ಷೆ ಹಾಗೂ 4,700 ರೂ.ದಂಡ ವಿಧಿಸಿ ಆದೇಶಿಸಿದೆ.
ಹೈದರಾಬಾದ್ ನಿವಾಸಿ ಅಲಿಯಾ ಬೇಗಂ ರಹಿಮೊದ್ದೀನ್ ರಸ್ತೆ ಬದಿ ನಿಂತಿದ್ದಾಗ ಚಾಲಕ ಪ್ರೇಮನಾಥ್ ಜೀಪ್‌ನಿಂದ ಢಿಕ್ಕಿ ಹೊಡೆದಿದ್ದ. ಅಲಿಯಾ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಚಿಕಿತ್ಸೆ ಫಲಿಸದೇ ದಾರಿ ಮಧ್ಯೆಯೆ ಸಾವಿಗೀಡಾಗಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಗ್ರಾಮೀಣ ಠಾಣೆ ಪೊಲೀಸರು ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ವಕೀಲರ ವಾದ ಆಲಿಸಿದ ನ್ಯಾಯಪೀಠವು ಆರೋಪಿಗೆ ಆರು ತಿಂಗಳ ಸಾದಾ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶಿಸಿದೆ.