ಬಜೆಟ್ ಮಂಡಿಸದೆ ಆರ್ಥಿಕ ಶಿಸ್ತು ಕಾಪಾಡಿದ ಸರಕಾರ: ಜೆಡಿಎಸ್ ಟೀಕೆ
Update: 2019-12-28 22:16 IST
ಬೆಂಗಳೂರು, ಡಿ.28: ಸ್ವಂತವಾಗಿ ಒಂದೇ ಒಂದು ಹಣಕಾಸು ಬಜೆಟ್ ಮಂಡಿಸದೆ ಆರ್ಥಿಕ ಶಿಸ್ತು ಕಾಪಾಡಿರುವ ಏಕಮಾತ್ರ ಸರಕಾರ ನಿಮ್ಮದು. ನಿಮ್ಮ ಪಕ್ಷದ ‘ಯೋಗ್ಯ’ ಸಾಧನೆಯನ್ನು ಜನರಿಗೆ ಈಗಲೇ ಹೇಳುವ ಹಪಾಹಪಿ ಇದ್ದರೆ ನಿಮ್ಮದೇ ಆಡಳಿತವಿರುವ ಉತ್ತರಪ್ರದೇಶದ ಬಗ್ಗೆ ಹೇಳಿ. ಆ ರಾಜ್ಯವೂ ಪ್ರಥಮ ಸ್ಥಾನದಲ್ಲೇ ಇದೆ, ಆದರೆ ‘ಕೆಟ್ಟ ಆಡಳಿತ’ ನಡೆಸುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಎಂದು ಜೆಡಿಎಸ್ ಟ್ವೀಟರ್‌ನಲ್ಲಿ ಟೀಕಿಸಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಉನ್ನತಿಯತ್ತ ಸಾಗುತ್ತಿದೆ. ಆರ್ಥಿಕ ಶಿಸ್ತು ಪಾಲನೆಯಲ್ಲಿ ಪ್ರಥಮ ಸ್ಥಾನ ಮತ್ತು ಉತ್ತಮ ಆಡಳಿತದಲ್ಲಿ ಮೂರನೇ ಸ್ಥಾನ ಪಡೆದಿದೆ ನಮ್ಮ ರಾಜ್ಯ. ‘ಉತ್ತಮ ಆಡಳಿತ ಸೂಚ್ಯಂಕ’ವು ನಮಗೆ ಸ್ವಚ್ಛ ಮತ್ತು ದಕ್ಷ ಆಡಳಿತ ನೀಡಲು ಸ್ಫೂರ್ತಿ ಒದಗಿಸಲಿದೆ ಎಂದು ಬಿಜೆಪಿ ಮಾಡಿದ್ದ ಟ್ವೀಟ್‌ಗೆ ಜೆಡಿಎಸ್ ಈ ಮೇಲಿನಂತೆ ತಿರುಗೇಟು ನೀಡಿದೆ.