×
Ad

ಮನೆ ಕಳ್ಳತನ ಪ್ರಕರಣ: ಆರೋಪಿಗೆ 3 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿದ ಕೋರ್ಟ್

Update: 2019-12-28 22:26 IST

ಕಲಬುರಗಿ, ಡಿ.28: ಮನೆಯ ಕೀಲಿ ಮುರಿದು 1.3 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದ ಆರೋಪಿಗೆ ಕಲಬುರಗಿ ಐದನೆ ಹೆಚ್ಚುವರಿ ಜೆಎಂಎಫ್ ಕೋರ್ಟ್ 3 ವರ್ಷ ಸಾದಾ ಕಾರಾಗೃಹ ಶಿಕ್ಷೆ ಹಾಗೂ 5 ಸಾವಿರ ದಂಡ ವಿಧಿಸಿದೆ.

ಆಜಾದಪುರ ರಸ್ತೆಯ ಮುಹಮ್ಮದ್ ಅಲ್ಮಾಸ್ ಶಿಕ್ಷೆಗೊಳಗಾದವನು. 2017ರ ಮೇ 28ರಂದು ಚಿಂಚೋಳಿ ಕ್ರಾಸ್ ಸಮೀಪದ ಸಾಗರ ಸಿಟಿಯಲ್ಲಿರುವ ಉದಯಕುಮಾರ ಮಠಪತಿ ಅವರ ಮನೆಗೆ ನುಗ್ಗಿದ್ದ ಮುಹಮ್ಮದ್ ಅಲ್ಮಾಸ್ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದ. ಈ ಬಗ್ಗೆ ದೂರು ದಾಖಲಿಸಿಕೊಂಡಿದ್ದ ಗ್ರಾಮೀಣ ಠಾಣೆ ಪೊಲೀಸರು ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ವಕೀಲರ ವಾದ ಆಲಿಸಿದ ನ್ಯಾಯಾಧೀಶ ಪಂಕಜಾ ಕೊಣ್ಣೂರ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದರು. ಸರಕಾರದ ಪರವಾಗಿ 5ನೆ ಸಹಾಯಕ ಸರಕಾರಿ ಅಭಿಯೋಜಕಿ ಛಾಯಾದೇವಿ ಪಾಟೀಲ ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News