ಬಾಂಗ್ಲಾ: ಚಳಿಯ ಬಾಧೆಗೆ ಕನಿಷ್ಠ 50 ಬಲಿ

Update: 2019-12-29 17:20 GMT

ಢಾಕಾ, ಡಿ.29: ಬಾಂಗ್ಲಾದ್ಯಂತ ತೀವ್ರ ಚಳಿಯ ಬಾಧೆಯಿಂದಾಗಿ ಕನಿಷ್ಠ 50 ಮಂದಿ ಸಾವನ್ನಪ್ಪಿದ್ದಾರೆಂದು ಅಧಿಕೃತ ಮೂಲಗಳು ತಿಳಿಸಿವೆ. ಬಾಂಗ್ಲಾದೇಶದ ಉತ್ತರದ ಗಡಿಪಟ್ಟಣವಾದ ತೆತುಲಿಯಾದಲ್ಲಿ ರವಿವಾರ ಮುಂಜಾನೆ 4.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಇದು ಇಡೀ ದೇಶದಲ್ಲೇ ಅತ್ಯಂತ ಕನಿಷ್ಠವಾಗಿತ್ತೆಂದು ಬಾಂಗ್ಲಾ ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಬಾಂಗ್ಲಾದ್ಯಂತ ನವೆಂಬರ್ 1ರಿಂದ ಮೊದಲ್ಗೊಂಡು ಡಿಸೆಂಬರ್ 28ರವರೆಗೆ ಚಳಿಯಿಂದಾಗಿ ಉಸಿರಾಟದ ಸೋಂಕಿಗೆ ಒಳಗಾಗಿ 17 ಮಂದಿ ಹಾಗೂ 33 ಮಂದಿ ಡಯೋರಿಯಾ ಮತ್ತಿತರ ರೋಗಗಳಿಂದ ಸಾವನ್ನಪ್ಪಿದ್ದಾರೆಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿ ಅಯೇಷಾ ಅಖ್ತರ್ ತಿಳಿಸಿದ್ದಾರೆ.

ಇನ್‌ಫ್ಲುಯೆಂಜಾ, ನಿರ್ಜಲೀಕರಣ (ಡಿಹೈಡ್ರೇಶನ್) ಹಾಗೂ ನ್ಯೂಮೋನಿ ಯಾದಂತಹ ಚಳಿಗೆ ಸಂಬಂಧಿಸಿದ ಕಾಯಿಲೆಗಳಿಂದ ಬಾಧಿತರಾಗಿರುವ ಜನರಿಂದ ಆಸ್ಪತ್ರೆಗಳು ತುಂಬಿತುಳುಕುತ್ತಿವೆಯೆಂದು ಅಖ್ತರ್ ತಿಳಿಸಿದ್ದಾರೆ.

ಬಾಂಗ್ಲಾದ್ಯಂತ ತೀವ್ರವಾದ ಚಳಿಗಾಳಿ ಹಾಗೂ ದಟ್ಟ ಮಂಜಿನ ವಾತಾವರಣ ಮುಂದಿನ ಕೆಲವು ದಿನಗಳವರೆಗೂ ಮುಂದುವರಿಯಲಿದೆಯೆಂದು ಅವರು ಹೇಳಿದ್ದಾರೆ. ದಟ್ಟವಾದ ಮಂಜು ಆವರಿಸಿರುವ ಕಾರಣದಿಂದಾಗಿ ಹಲವು ವಿಮಾನಗಳ ಯಾನವನ್ನು ರದ್ದುಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News