ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ಪೋಷಕರ ಕರ್ತವ್ಯ: ವೆಂಕಟೇಶ್

Update: 2019-12-29 18:03 GMT

ಹನೂರು: ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ಪೋಷಕರ ಕರ್ತವ್ಯ ಎಂದು ಬಣ್ಣ ಮತ್ತು ಅರಗು ಕಾರ್ಖಾನೆಯ ಮಾಜಿ ಅದ್ಯಕ್ಷ ವೆಂಕಟೇಶ್ ಹೇಳಿದರು.

ಹನೂರು ತಾಲೂಕಿನ ಎಲ್ಲೆಮಾಳ ಗ್ರಾಮದ ನೇಸರ ವಿದ್ಯಾಲಯದ ಶಾಲಾ ವಾಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಆಂಗ್ಲ ಮಾದ್ಯಮದ ಶಿಕ್ಷಣ ಸಂಸ್ಥೆಯನ್ನು ಇದೇ ಗ್ರಾಮದ ಮಾದೇಶ್ ರವರು ಪ್ರಾರಂಭಿಸಿ ಉತ್ತಮ ಶಿಕ್ಷಣ ನೀಡುತ್ತಿದ್ದಾರೆ. ಅದೇ ರೀತಿ ಪೋಷಕರು ಸಹ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ನಗರ ಭಾಗದ ವಿದ್ಯಾರ್ಥಿಗಳ ಜೊತೆ ಪೈಪೋಟಿ ನೀಡಬೇಕಾದ ಅನಿವಾರ್ಯತೆ ಇದೆ.  ಕನ್ನಡ ಭಾಷೆಯ ಜೊತೆ ಆಂಗ್ಲ ಭಾಷೆಯ ಪರಿಣಿತಿ ಕೂಡ ಈಗ ಬೇಕಾಗಿದೆ, ಆದ ಕಾರಣ ಮಕ್ಕಳು ಉತ್ತಮವಾಗಿ ವಿದ್ಯಾಬ್ಯಾಸ ಮಾಡಿ ಗ್ರಾಮ ಮತ್ತು ಪೋಷಕರಿಗೆ ಹೆಸರು ತರಬೇಕು ಎಂದು ಹೇಳಿದರು. 

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಸದಸ್ಯೆ ಮಂಜುಳಾ, ವಕೀಲ ರಂಗಸ್ವಾಮಿ, ಮಾಜಿ ತಾಲ್ಲೂಕು ಪಂಚಾಯತಿ ಅದ್ಯಕ್ಷ ಮುರುಡೇಶ್ವರ, ದೇವರಾಜು, ಮಾಜಿ ಗ್ರಾಮ ಪಂ ಅದ್ಯಕ್ಷ ಮಹದೇವ, ಸಿಆರ್‍ಪಿ ಸಿದ್ದರಾಜು, ವಂಗಪ್ಪ, ಗೋಪಾಲಕೃಷ್ಣ, ಸೊಮಶೇಖರ್ ,ಮುನಿಯಪ್ಪ, ಮುಖ್ಯ ಶಿಕ್ಷಕಿ ಲತಾಮಣಿ, ವೆಂಕಟರಾಜು ಮುಂತಾದವರು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News