ತನ್ವೀರ್ ಸೇಠ್ ಮೇಲೆ ಹಲ್ಲೆ ಪ್ರಕರಣ: ಎಂಟನೇ ಆರೋಪಿ ಬಂಧನ

Update: 2019-12-30 17:25 GMT
ಸಾಂದರ್ಭಿಕ ಚಿತ್ರ

ಮೈಸೂರು,ಡಿ.30: ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 8ನೇ ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತನನ್ನು ಗೌಸಿಯಾ ನಗರದ ಮತೀನ್ ಬೇಗ್(45) ಎಂದು ಗುರುತಿಸಲಾಗಿದೆ. ತನ್ವೀರ್ ಸೇಠ್ ಕೊಲೆ ಯತ್ನಕ್ಕೆ ಸಹಕರಿಸಿದ್ದ ಆರೋಪದಲ್ಲಿ ಮತೀನ್ ಬೇಗ್‍ನನ್ನು ಬಂಧಿಸಲಾಗಿದೆ. ಶಾಸಕ ತನ್ವೀರ್ ಸೇಠ್ ಕೊಲೆಗೆ ಯತ್ನಿಸಿದ್ದ ಆರೋಪಿ ಫರ್ಹಾನ್ ಪಾಷನನ್ನು ಘಟನೆ ನಡೆದ ಕ್ಷಣದಲ್ಲೇ ಸ್ಥಳೀಯರ ಸಹಕಾರದಿಂದ ಪೊಲೀಸರು ಬಂಧಿಸಿದ್ದರು. ನಂತರ ಆರೋಪಿಯನ್ನು ವಿಚಾರಣೆ ನಡೆಸಿ ಆರೋಪಿಗೆ ಸಹಕರಿಸಿದ 7 ಮಂದಿಯನ್ನು ಬಂಧಿಸಿದ್ದರು.

ಈ ಬಂಧನದ ಬಂಧಿತರ ಸಂಖ್ಯೆ 8ಕ್ಕೇರಿದೆ. ಡಿಸಿಪಿ ಮುತ್ತುರಾಜ್ ಎಂ ನೇತೃತ್ವದಲ್ಲಿ ರಚಿಸಿರುವ ತನಿಖಾ ತಂಡದಿಂದ ಆರೋಪಿ ಬಂಧನವಾಗಿದ್ದು, ಪ್ರಕರಣದ ವಿಚಾರಣೆ ಬಿರುಸಾಗಿ ಸಾಗಿದೆ. ಇನ್ನೂ ಹಲವರ ಬಂಧನದ ಸಾಧ್ಯತೆ ಇದೆ.

ಶಾಸಕ ತನ್ವೀರ್ ಸೇಠ್ ಬನ್ನಿಮಂಟಪದ ಬಳಿ ತಮ್ಮ ಸಂಬಂಧಿಯ ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದರು. ಈ ವೇಳೆ ಆರೋಪಿ ಫರ್ಹಾನ್(24)  ಶಾಸಕ ತನ್ವೀರ್ ಸೇಠ್ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದ. ಕುತ್ತಿಗೆಗೆ ಇರಿದು ತೀವ್ರವಾಗಿ ಗಾಯಗೊಳಿಸಿದ್ದ. ನಂತರ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಸೇಠ್ ಅವರನ್ನು ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಎನ್ ಆರ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News