×
Ad

ಬಾಲಕಿಯ ಅತ್ಯಾಚಾರ ಯತ್ನ: ಆರೋಪಿಗೆ 3 ವರ್ಷ ಜೈಲು

Update: 2019-12-31 23:32 IST
ಸಾಂದರ್ಭಿಕ ಚಿತ್ರ

ಕಾರವಾರ, ಡಿ.31: ಶಾಲೆಗೆ ತೆರಳುವ ಬಾಲಕಿಯ ಅತ್ಯಾಚಾರಕ್ಕೆ ಯತ್ನಿಸಿದ ಪ್ರಕರಣದ ಆರೋಪಿಗೆ 3 ವರ್ಷ ಜೈಲು ಹಾಗೂ 11 ಸಾವಿರ ದಂಡ ವಿಧಿಸಿ ನ್ಯಾಯಾಲಯ ಆದೇಶಿಸಿದೆ.

ಕಳೆದ 2017ರ 25 ರಂದು ಸಿದ್ದಾಪುರ ತಾಲೂಕಿನ ಚಿಪ್ಪಳ ಮುತ್ತಿಗೆ ಗ್ರಾಮದ ನಿವಾಸಿ ಸುನೀಲ ಮಹಾದೇವ ನಾಯ್ಕ ಎಂಬಾತ ಬಿದ್ರಕಾನದಿಂದ ನರಮುಂಡಿ ಮಾರ್ಗದ ಚಟ್ನಳ್ಳಿ ಕ್ರಾಸ ಬಳಿ ಇರುವ ಕಾಡಿನಲ್ಲಿ ಶಾಲಾ ಬಾಲಕಿಯನ್ನು ಅಡ್ಡಗಡ್ಡಿ, ಕೈ ಹಿಡಿದು ಎಳೆದಾಡಿದ ಕಾರಣ ಆಕೆ ಗಾಯಗೊಂಡಿದ್ದಳು.  ಈ ವೇಳೆ ವಾಹನವೊಂದು ಬಂದದನ್ನು ಗಮನಿಸಿ ಆತ ಪರಾರಿಯಾದ ಬಗ್ಗೆ ಸಿದ್ದಾಪುರ ಪೋಲೀಸ ಠಾಣಾ ತನಿಖಾಧಿಕಾರಿ ಜಯಂತ ಎಂ.ಪಿ. ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದರು.

ನೊಂದ ಬಾಲಕಿ ಪರವಾಗಿ ವಿಶೇಷ ಸರ್ಕಾರಿ ಪೋಕ್ಸೋ ಅಭಿಯೋಜಕರಾದ ಸುಭಾಷ ಪಿ. ಕೈರನ್ನ ವಾದ ಮಂಡಿಸಿದ್ದು, ಆರೋಪಿಯೂ ಇನ್ನೊಂದು ಪ್ರಕರಣದಲ್ಲಿಯೂ ಭಾಗಿಯಾಗಿ ಶಿಕ್ಷೆಗೊಳಗಾದದನ್ನು ನ್ಯಾಯಾಲಯದ ಗಮನಕ್ಕೆ ತಂದರು.

ವಾದ ಆಲಿಸಿದ ಜಿಲ್ಲಾ ನ್ಯಾಯಾಧೀಶೆ ವಿಪುಲಾ ಪೂಜಾರಿ ಶಿಕ್ಷೆ ಪ್ರಕಟಿಸಿದರು. ಬಾಲಕಿಗೆ ಕಾನೂನು ಸೇವಾ ಪ್ರಾಧಿಕಾರದಿಂದ 15 ಸಾವಿರ ರೂ ಪರಿಹಾರ ನೀಡುವಂತೆಯೂ ಅವರು ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News