×
Ad

ಕಾಂಗ್ರೆಸ್ ನಾಯಕರನ್ನು ಟೀಕಿಸುವ ಬದಲು....: ಸಚಿವ ಸೋಮಣ್ಣಗೆ ಪ್ರಕಾಶ್ ರಾಠೋಡ್ ತಿರುಗೇಟು

Update: 2020-01-03 20:12 IST

ಬೆಂಗಳೂರು, ಜ.3: ವಸತಿ ಇಲಾಖೆಯ ಸಚಿವ ವಿ.ಸೋಮಣ್ಣ ಕಾಂಗ್ರೆಸ್ ನಾಯಕರನ್ನು ಟೀಕಿಸುವ ಬದಲು, ತಮ್ಮ ಇಲಾಖೆಯಲ್ಲಿ ನಡೆಯುತ್ತಿರುವ ಅವ್ಯವಹಾರಗಳ ಕಡೆಗೆ ಗಮನ ವಹಿಸಲಿ ಎಂದು ವಿಧಾನಪರಿಷತ್ ಸದಸ್ಯ ಪ್ರಕಾಶ್ ರಾಠೋಡ್ ತಿರುಗೇಟು ನೀಡಿದ್ದಾರೆ.

ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತು ರಾಜ್ಯ ಸರಕಾರದ ವೈಫಲ್ಯಗಳನ್ನು ಪ್ರಶ್ನಿಸುವಂತಹ ಕೆಲಸ ಮಾಡುತ್ತಿದೆ. ಇದನ್ನು ಸಹಿಸದ ಸಚಿವ ವಿ.ಸೋಮಣ್ಣ, ಕಾಂಗ್ರೆಸ್‌ನವರು ಕಾಮಾಲೆ ಕಣ್ಣಿನವರೆಂದು ಟೀಕಿಸಿರುವುದು ಸರಿಯಲ್ಲವೆಂದು ತಿಳಿಸಿದರು.

ಸಚಿವ ಸೋಮಣ್ಣ ಕಾಂಗ್ರೆಸ್ ನಾಯಕರನ್ನು ಟೀಕಿಸುವ ಬದಲಿಗೆ, ತಮ್ಮ ಇಲಾಖೆಯಲ್ಲಿ ವಸತಿ ಹಂಚಿಕೆಯಲ್ಲಿ ನಡೆಯುತ್ತಿರುವ ಅವ್ಯಹಾರಗಳನ್ನು ತಡೆಯುವುದಕ್ಕೆ ಹೆಚ್ಚಿನ ಆಸಕ್ತಿ ವಹಿಸಲಿ. ಕಾಂಗ್ರೆಸ್ ಆಡಳಿತಾವಧಿಯಲ್ಲಿ ಪಟ್ಟಿಮಾಡಿದ್ದ ಫಲಾನುಭವಿಗಳಿಗೆ ವಸತಿ ನೀಡದೆ ವಂಚಿಸಿರುವಂತಹ ಘಟನೆಗಳು ನಡೆಯುತ್ತಿರುವುದು ದುರದೃಷ್ಟಕರವೆಂದು ಅವರು ಅರೋಪಿಸಿದರು.

ದಸರಾ ಸಂದರ್ಭದಲ್ಲಿ ಕ್ರೀಡೆಗಳಲ್ಲಿ ಭಾಗವಹಿಸಿದ್ದ ಕ್ರೀಡಾಪಟುಗಳಿಗೆ ಇಲ್ಲಿಯವರೆಗೂ ಗೌರವಧನ ಸಿಕ್ಕಿಲ್ಲ. ದಸರಾ ಮುಗಿದು ಇಷ್ಟು ತಿಂಗಳಾದರು ಕನಿಷ್ಠ ಗೌರವಧನ ನೀಡಲು ಆಸಕ್ತಿ ವಹಿಸದ ಸಚಿವ ವಿ.ಸೋಮಣ್ಣ, ಪ್ರತಿಪಕ್ಷಗಳನ್ನು ಟೀಕಿಸುವುದಕ್ಕೆ ಸೀಮಿತಗೊಂಡಿದ್ದಾರೆಂದು ಅವರು ಕಿಡಿಕಾರಿದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News