ಠಾಣೆಯಲ್ಲೇ ಹೃದಯಾಘಾತದಿಂದ ಪೊಲೀಸ್ ಪೇದೆ ಮೃತ್ಯು
Update: 2020-01-05 19:19 IST
ಕಡೂರು, ಜ.5: ಕರ್ತವ್ಯ ನಿರತ ಪೊಲೀಸ್ ಪೇದೆಯೊಬ್ಬರು ಪೊಲೀಸ್ ಠಾಣೆಯಲ್ಲೇ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ತಾಲೂಕಿನ ಯಗಟಿ ಪೊಲೀಸ್ ಠಾಣೆಯಲ್ಲಿ ರವಿವಾರ ವರದಿಯಾಗಿದೆ.
ಮೃತ ಪೊಲೀಸ್ ಪೇದೆ ಕಡೂರು ತಾಲೂಕಿನ ಚಿಕ್ಕನಲ್ಲೂರು ಗ್ರಾಮದ ಕೃಷ್ಣಮೂರ್ತಿ(40) ಎಂದು ತಿಳಿದುಬಂದಿದ್ದು, ರವಿವಾರ ಎಂದಿನಂತೆ ಯಗಟಿ ಪೊಲೀಸ್ ಠಾಣೆಗೆ ಕರ್ತವ್ಯಕ್ಕೆ ಆಗಮಿಸಿದ್ದ ಪೊಲೀಸ್ ಪೇದೆ ಕೃಷ್ಣಮೂರ್ತಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಎದೆ ನೋವಿನಿಂದ ನೆಲಕ್ಕೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.