ಓ ಮೆಣಸೇ...

Update: 2020-01-05 18:23 GMT

  *ಭಾರತ ಕ್ರಿಕೆಟ್ ತಂಡಕ್ಕೆ ಈ ವರ್ಷ ನಿಜವಾದ ಸವಾಲು ಎದುರಾಗಲಿದೆ - ಸೌರವ್ ಗಂಗುಲಿ, ಬಿಸಿಸಿಐ ಅಧ್ಯಕ್ಷ  
ಇಡೀ ದೇಶವೇ ಸವಾಲುಗಳನ್ನು ಎದುರಿಸುವ ದಿಕ್ಕಿನಲ್ಲಿರುವಾಗ, ಇವರ ಸಮಸ್ಯೆಯೇ ಬೇರೆ.

---------------------

ನಾನು ಸಾಹಿತ್ಯ ಬರೆಯುವುದು ರಸಾನುಭವಕ್ಕೆ ಮಾತ್ರ - ಎಸ್.ಎಲ್.ಭೈರಪ್ಪ, ಸಾಹಿತಿ
ಆರೆಸ್ಸೆಸ್‌ನೊಂದಿಗಿನ ಸರಸಾನುಭವ ಎಂದೂ ಕರೆಯಬಹುದು.

---------------------

‘ಭಾರತ್ ಮಾತಾಕಿ ಜೈ’ ಎಂದು ಘೋಷಣೆ ಕೂಗದವರಿಗೆ ಭಾರತದಲ್ಲಿ ಬದುಕುವ ಹಕ್ಕಿಲ್ಲ - ಧರ್ಮೇಂದ್ರ ಪ್ರಧಾನ್, ಕೇಂದ್ರ ಸಚಿವ
 ಬದುಕುವ ಹಕ್ಕನ್ನು ನಿರ್ಧರಿಸುವುದಕ್ಕಾಗಿಯೇ ದೇಶಾದ್ಯಂತ ಆಝಾದಿ ಕೂಗು ಎದ್ದಿರುವುದು.

---------------------

ಮುಂದಿನ ದಶಕ ಯುವ ಸಮುದಾಯಕ್ಕೆ ಸೇರಿದ್ದು - ನರೇಂದ್ರ ಮೋದಿ, ಪ್ರಧಾನಿ
ಹೌದು, ಅವರೇ ನಿಮ್ಮ ಭವಿಷ್ಯ ನಿರ್ಧರಿಸಲಿದ್ದಾರೆ.

--------------------

ನಮಗೆ ಕೃಷ್ಣ , ಏಸು ಒಂದೇ - ಸಿ.ಟಿ.ರವಿ, ಸಚಿವ

ಒಡೆಯುವ ವಿಷಯದಲ್ಲಿ.

---------------------
ಕಾಂಗ್ರೆಸ್‌ನವರು ರಾಜಕೀಯವನ್ನು ಧರ್ಮದಲ್ಲಿ ಬೆರೆಸುತ್ತಿದ್ದಾರೆ - ದಿನೇಶ್ ಶರ್ಮಾ , ಉ.ಪ.ಉಪಮುಖ್ಯಮಂತ್ರಿ
ನೀವು ರಾಜಕೀಯದಲ್ಲಿ ವಿಷವನ್ನೇ ಬೆರೆಸುತ್ತಿದ್ದೀರಲ್ಲ...

---------------------

ಬಡವರಿಗೆ ಗುಣಮಟ್ಟದ ಮದ್ಯವನ್ನು ಕಡಿಮೆ ದರದಲ್ಲಿ ಪೂರೈಕೆ ಮಾಡುವ ಚಿಂತನೆ ಇದೆ - ಎಚ್.ನಾಗೇಶ್, ಸಚಿವ
ವಿದ್ಯಾರ್ಥಿಗಳಿಗೆ ಗುಣಮಟ್ಟದ ಬಿಸಿಯೂಟವನ್ನಾದರೂ ಒದಗಿಸಬಾರದೆ?

---------------------
ಮಹಾರಾಷ್ಟ್ರದಲ್ಲಿ ಈಗ ಇರುವುದು ಹುಚ್ಚರ ಸರಕಾರ - ಆರ್.ಅಶೋಕ್, ಸಚಿವ
ಆ ಹುಚ್ಚರ ಜೊತೆಗೇ ಈವರೆಗೆ ನೀವು ಮೈತ್ರಿ ಮಾಡಿಕೊಂಡಿರುವುದು. ನೆನಪಿರಲಿ.

---------------------
ಸಿದ್ದರಾಮಯ್ಯನವರೇ ಇಂದಿಗೂ ನಮ್ಮ ನಾಯಕ - ರಮೇಶ್ ಜಾರಕಿಹೊಳಿ, ಬಿಜೆಪಿ ಶಾಸಕ
ಅವರನ್ನು ಮುಖ್ಯಮಂತ್ರಿ ಮಾಡುವುದಕ್ಕಾಗಿ ಬಿಜೆಪಿ ತೊರೆಯುವ ಉದ್ದೇಶವೇನಾದರೂ ಇದೆಯೆ?

---------------------

ನಾನು ಯಾವುದಕ್ಕೂ ಜೋತು ಬೀಳುವ ವ್ಯಕ್ತಿ ಅಲ್ಲ - ಗೋವಿಂದ ಕಾರಜೋಳ, ಉಪಮುಖ್ಯಮಂತ್ರಿ
ಮತ್ತೆ ಹೇಗೆ ಬೀಳುವ ವ್ಯಕ್ತಿ ಎನ್ನುವುದನ್ನು ಹೇಳಿ.

---------------------

ದೇಶ ಕಂಡ ಅತ್ಯಂತ ದೊಡ್ಡ ಬೊಗಳೆ ವ್ಯಕ್ತಿ ಪ್ರಧಾನಿ ನರೇಂದ್ರ ಮೋದಿ - ವಿ.ಎಸ್.ಉಗ್ರಪ್ಪ, ಮಾಜಿ ಸಂಸದ  
ಬೊಗಳುವ ವ್ಯಕ್ತಿ ಎನ್ನುವ ಆರೋಪವೂ ಇದೆ.

---------------------

370ನೇ ವಿಧಿ ರದ್ದತಿಯಿಂದ ಕಾಶ್ಮೀರದಲ್ಲಿ ಭಯೋತ್ಪಾದನೆ ಇಳಿಕೆ - ಮನೋಜ್ ಮುಕುಂದ್ ನರವಾಣೆ, ಸೇನಾ ವರಿಷ್ಠ  
ಜನರೀಗ ಸೇನೆಯ ಭಯದಿಂದ ನರಳುತ್ತಿದ್ದಾರೆ.

---------------------

ಪ್ರಜ್ಞಾಸಿಂಗ್ ಠಾಕೂರ್ ಬಾಯಿ ತೆರೆದರೆ ವಿಷ ಕಾರುತ್ತಾರೆ - ಭೂಪೇಶ್ ಬಾೇಲ್, ಛತ್ತೀಸ್‌ಗಡ ಮುಖ್ಯಮಂತ್ರಿ
ವಿಷ ಕಾರಿದ್ದಕ್ಕಾಗಿಯೇ ಆಕೆಯನ್ನು ಸಂಸತ್‌ನಲ್ಲಿ ತಂದು ಕೂರಿಸಲಾಗಿದೆ.

---------------------

ಹಣೆಬರಹದಲ್ಲಿದ್ದರೆ 2024ರಲ್ಲಿ ನಾನೇ ಮುಖ್ಯಮಂತ್ರಿ - ಬಸನಗೌಡ ಪಾಟೀಲ ಯತ್ನಾಳ್, ಶಾಸಕ
ಅದು ಆರೆಸ್ಸೆಸ್‌ನ ಬರಹದಲ್ಲೂ ಇರಬೇಕಲ್ಲ?

---------------------

ಇಡೀ ವಿಶ್ವವೇ ಪ್ರಧಾನಿ ನರೇಂದ್ರ ಮೋದಿಯ ಆಡಳಿತವನ್ನು ಒಪ್ಪಿಕೊಂಡಿದೆ - ನಳಿನ್‌ಕುಮಾರ್ ಕಟೀಲು, ಸಂಸದ

ಹೌದು, ಭಾರತ ಒಂದು ಬಿಟ್ಟು.

---------------------

ಮುಖ್ಯಮಂತ್ರಿ ಯಡಿಯೂರಪ್ಪ ನಿಜವಾಗಲೂ ದೇವರಾಜ ಅರಸು ಹಾದಿಯಲ್ಲಿ ಕೆಲಸ ಮಾಡುತ್ತಿದ್ದಾರೆ - ಕೆ.ಪಿ.ನಂಜುಂಡಿ, ವಿ.ಪ.ಸದಸ್ಯ
ಅಂದರೆ ಅರಸರು ಕಾಂಗ್ರೆಸ್ ಒಡೆದಂತೆ ಯಡಿಯೂರಪ್ಪ ಬಿಜೆಪಿ ಒಡೆಯಲಿದ್ದಾರೆಯೇ?

---------------------

ಬಿಜೆಪಿಯವರು ಪ್ರತಿ ಜಿಲ್ಲೆಗೆ ಒಬ್ಬೊಬ್ಬ ಉಪಮುಖ್ಯಮಂತ್ರಿಯನ್ನು ಮಾಡಲಿ ನಮ್ಮದೇನೂ ಅಭ್ಯಂತರವಿಲ್ಲ - ಎಚ್.ಡಿ.ರೇವಣ್ಣ , ಮಾಜಿ ಸಚಿವ
ಭವಿಷ್ಯದಲ್ಲಿ ಹಾಸನ ಜಿಲ್ಲೆಯ ಮುಖ್ಯಮಂತ್ರಿಯಾಗುವ ಉದ್ದೇಶ ವಿರಬೇಕು.

---------------------

ಉಪ ಮುಖ್ಯಮಂತ್ರಿ ಹುದ್ದೆ ಬಗ್ಗೆ ಹಾದಿಬೀದಿಯಲ್ಲಿ ಚರ್ಚಿಸುವುದಿಲ್ಲ - ಲಕ್ಷ್ಮಣಸವದಿ, ಉಪ ಮುಖ್ಯಮಂತ್ರಿ
ರಾಜ್ಯದ ಹಾದಿ ಬೀದಿಗೊಬ್ಬ ಉಪಮುಖ್ಯಮಂತ್ರಿ ಮಾಡಿದರೆ ಹೇಗೆ?

---------------------

ಹೊಸ ವರ್ಷದ ಆಚರಣೆ ಕುಡುಕರ ಆಚರಣೆಯಾಗಿದೆ - ಪ್ರಮೋದ್ ಮುತಾಲಿಕ್, ಶ್ರೀರಾಮ ಸೇನೆಯ ಮುಖ್ಯಸ್ಥ
ಭರ್ಜರಿಯಾಗಿ ಹೊಸ ವರ್ಷ ಆಚರಿಸಿದಂತಿದೆ.

---------------------

ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿಯಿಂದ ನಾವು ಜಗತ್ತಿನ ಎಲ್ಲ ದೇಶಗಳಿಗೆ ತಲುಪಿದ್ದೇವೆ - ರವೀಶ್‌ಕುಮಾರ್, ಬಿಜೆಪಿ ವಕ್ತಾರ
ಬೆತ್ತಲೆಯಾಗಿ ತಿರುಗಿದರೆ ಇಡೀ ವಿಶ್ವ ನೋಡದೆ ಇರುತ್ತದೆಯೇ?

---------------------

ರಾಜ್ಯದಲ್ಲಿ ಸಮರ್ಥವಾದ ಮುಖ್ಯಮಂತ್ರಿ ಇರುವಾಗ ಉಪ ಮುಖ್ಯಮಂತ್ರಿಗಳ ಹುದ್ದೆಯ ಅಗತ್ಯವಿಲ್ಲ - ರೇಣುಕಾಚಾರ್ಯ , ಮಾಜಿ ಸಚಿವ
ಮುಖ್ಯಮಂತ್ರಿಯನ್ನು ಅಸಮರ್ಥರನ್ನಾಗಿಸುವುದಕ್ಕಾಗಿಯೇ ಇರುವ ಹುದ್ದೆಗಳಂತೆ ಅವು.

---------------------

ಮಿಶನರಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಸಂಸ್ಕಾರ ಇರುವುದಿಲ್ಲ - ಗಿರಿರಾಜ್ ಸಿಂಗ್, ಕೇಂದ್ರ ಸಚಿವ
 ಮಿಶನರಿ ಶಾಲೆಗಳಲ್ಲಿ ಓದಿದ್ದರೆ ಹೀಗೆಲ್ಲ ಸಂಸ್ಕಾರ ರಹಿತವಾಗಿ ಮಾತನಾಡುತ್ತಿರಲಿಲ್ಲ.

---------------------
ಡಿಜಿಟಲೀಕರಣ, ತಂತ್ರಜ್ಞಾನ ಬಳಕೆಯಿಂದ ಭ್ರಷ್ಟಾಚಾರ ಬಂದ್ ಆಗಿದೆ - ನರೇಂದ್ರ ಸಿಂಗ್ ತೋಮರ್,

ಕೇಂದ್ರ ಸಚಿವ ದೇಶ ಬಂದ್ ಆಗಿರುವುದಂತೂ ನಿಜ.

---------------------

ಸಂಕ್ರಾತಿ ಬಳಿಕ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ಆಗಬಹುದು - ಕೆ.ಎಸ್.ಈಶ್ವರಪ್ಪ, ಸಚಿವ  
ಅಂತೂ ಕ್ರಾಂತಿಯಾಗಲಿದೆ ಎಂದಾಯಿತು.

---------------------

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...