ಆರೆಸ್ಸೆಸ್ ದೇಶವನ್ನು ಆಳುತ್ತಿದೆ: ಪ್ರಿಯಾಂಕ್ ಖರ್ಗೆ

Update: 2020-01-07 16:45 GMT

ವಿಜಯಾಪುರ, ಜ.7: ದೇಶವನ್ನು ಆಳುತ್ತಿರುವುದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸಚಿವರಲ್ಲ. ಬದಲಿಗೆ, ನಾಗ್ಪುರದ ಆರೆಸ್ಸೆಸ್ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

 ಮಂಗಳವಾರ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಓತಿಹಾಳ ಗ್ರಾಮದಲ್ಲಿ ನಿರ್ಮಿಸಲಾಗಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದ ಅವರು, ದೇಶದ ಇತಿಹಾಸದಲ್ಲಿ ಆರೆಸ್ಸೆಸ್‌ಗೆ ಜಾಗವೇ ಇಲ್ಲ. ಹೀಗಾಗಿ ದೇಶದ್ರೋಹಿಗಳನ್ನು ದೇಶಭಕ್ತರೆಂದು ಬಿಂಬಿಸುವ ಮೂಲಕ ಚರಿತ್ರೆಯನ್ನು ಸೃಷ್ಟಿಸಲು ಹೊರಟ್ಟಿದ್ದಾರೆಂದು ಕಿಡಿಕಾರಿದರು.

ದೇಶದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ದಲಿತರು, ಅಲ್ಪಸಂಖ್ಯಾತರು, ಬಡವರು, ಶ್ರಮಿಕರು, ದುಡಿಯುವ ವರ್ಗದವರು ಭಯದಿಂದ ಬದುಕುವಂತಾಗಿದೆ. ಕೇಂದ್ರ ಸರಕಾರ ತನ್ನ ಜನವಿರೋಧಿ ನೀತಿಗಳನ್ನು ಜನತೆಯ ಮೇಲೆ ಒತ್ತಾಯವಾಗಿ ಹೇರುತ್ತಿದೆ. ಇದನ್ನು ವಿರೋಧಿಸುವವರನ್ನು ಪ್ರಭುತ್ವವೇ ಹಿಂಸಿಸುತ್ತಿದೆ ಎಂದು ಅವರು ಆರೋಪಿಸಿದರು.

ದೇಶದ ಎಲ್ಲ ಜಾತಿ, ಸಮುದಾಯಗಳಿಗೂ ಸಮಾನ ಅವಕಾಶ, ಸೌಲಭ್ಯಗಳನ್ನು ನೀಡಬೇಕೆಂಬ ಡಾ.ಬಿ.ಆರ್.ಅಂಬೇಡ್ಕರ್ ಆಶಯದ ಸಂವಿಧಾನದ ನೀತಿಯನ್ನು ಆರೆಸ್ಸೆಸ್ ಒಪ್ಪುವುದಿಲ್ಲ. ಹೀಗಾಗಿ ಸಂವಿಧಾನವನ್ನು ತಿರುಚುವಂತಹ ಕೃತ್ಯವನ್ನು ಬಿಜೆಪಿ ಮೂಲಕ ಆರೆಸ್ಸೆಸ್ ಮಾಡಿಸುತ್ತಿದೆ. ಇದಕ್ಕೆ ದೇಶದ ಜನತೆ ಅವಕಾಶ ಮಾಡಿಕೊಡಬಾರದು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News