‘ಬಸವಣ್ಣ ವಿಚಾರಧಾರೆಗಳು ಎಲ್ಲಾ ಕಾಲಕ್ಕೂ ಮಾದರಿ’

Update: 2020-01-07 18:20 GMT

ವಿಜಯಪುರ, ಜ.7: ವಿಶ್ವಗುರು ಬಸವಣ್ಣನವರು 12ನೇ ಶತಮಾನದಲ್ಲಿ ಮೇಲು ಕೀಳೆಂಬ ಭೇದಭಾವ ಹೋಗಲಾಡಿಸಿ ಸಮಾನತೆ ಸಂದೇಶ ನೀಡಿ ಸುಂದರ ಸಮಾಜವನ್ನು ನಿರ್ಮಿಸಿದ್ದಾರೆ.ಅವರ ವಚನಗಳು ವಿಚಾರಧಾರೆಗಳು ಎಲ್ಲ ಶತಮಾನಗಳಿಗೂ ಮಾದರಿಯಾಗಿದ್ದು, ವಚನಗಳಲ್ಲಿ ಮಾನವನ ಬದುಕಿಗೆ ಬೇಕಾದ ಅಗತ್ಯ ಅಂಶಗಳು ಇದ್ದು ಅವುಗಳನ್ನು ಅರ್ಥೈಸಿಕೊಂಡು ನಡೆದರೆ ಬದುಕು ಸುಂದರವಾಗಿರಲು ಸಾಧ್ಯ ಎಂದು ಡಾ.ವೀಣಾ ಗುಳೇದಗುಡ್ಡ ಹೇಳಿದ್ದಾರೆ.

ಸ್ಥಳೀಯ ಜ್ಞಾನ ಭಾರತಿ ವಿದ್ಯಾ ಸಂಸ್ಥೆಯಲ್ಲಿ ಡಾ. ನೀರಜ್ ಪಾಟೀಲ ಅವರ ಜನ್ಮದಿನದ ಪ್ರಯುಕ್ತ ಡಾ. ನೀರಜ್ ಪಾಟೀಲ ಅಭಿಮಾನಿಗಳ ಬಳಗದ ವತಿಯಿಂದ ಒಂದು ಸಾವಿರ ವಚನಗಳನ್ನು ವಿದ್ಯಾರ್ಥಿಗಳಿಗೆ ಹಂಚುವ ಮುಖಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಸವನಾಡಿನ ಪವಿತ್ರವಾದ ಕೃಷ್ಣಾನದಿ ತೀರದಿಂದ ಹಿಡಿದು ಲಂಡನ್ನಿನ ಥೇಮ್ಸ್ ನದಿ ದಂಡೆವರೆಗೂ ಬಸವಣ್ಣನವರ ವಿಚಾರಧಾರೆಗಳನ್ನು ಪ್ರಚಾರ ಪಡೆದು ಬಾಲ್ಯದಲ್ಲಿಯೇ ಬಸವಣ್ಣನವರ ವಿಚಾರಧಾರೆಗಳಿಗೆ ಪ್ರೇರಣೆಯಾಗಿ ತಮ್ಮ ಜೀವನದಲ್ಲೇ ಅವರ ತತ್ವಾದರ್ಶ ಗುಣಗಳನ್ನು ಬೆಳೆಸಿಕೊಂಡು ವಿದೇಶದಲ್ಲಿ ಕಾಯಕ ಸೇವೆ ಮಾಡುತ್ತಿರುವ ಲಂಡನ್ನಿನ ಮಾಜಿ ಮೇಯರ್ ಅವರ ಆಪಾರವಾದ ಸೇವೆ ಅವಿಸ್ಮರಣಿಯವಾಗಿದೆ ಎಂದು ಹೇಳಿದರು.

ಸಾಹಿತಿ ಸಾವಿತ್ರಿ ಕಲ್ಯಾಣ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳಲ್ಲಿ ಆಚಾರ ವಿಚಾರ ಸಂಸ್ಕೃತಿ ವಚನ ಜ್ಞಾನದ ಬಗ್ಗೆ ತಿಳುವಳಿಕೆ ಮೂಡಿಸುವ ಉದ್ದೇಶದಿಂದ ಒಂದು ಸಾವಿರ ವಚನಗಳನ್ನು ಹಂಚುವ ಕಾರ್ಯ ಶ್ಲಾಘನೀಯ ಎಂದರು.

ಈ ಸಂದರ್ಭದಲ್ಲಿ ವಿಶ್ವಬಂಧು ಬಸವ ಸಮಿತಿ ಅಧ್ಯಕ್ಷ ರಾಜುಗೌಡ ಚಿಕ್ಕೊಂಡ, ಪುರಸಭೆ ಸದಸ್ಯೆ ಜಗದೇವಿ ಗುಂಡಳ್ಳಿ, ಸ್ವರೂಪರಾಣಿ ಬಿಂಜಲಬಾವಿ, ನೀಲಮ್ಮ ಹೂಗಾರ ಮಾತನಾಡಿದರು. ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಾಧ್ಯಕ್ಷ ಮಹಾಂತೇಶ ಚಕ್ರವರ್ತಿ, ಗಂಗಾಧರ ಬಿರಾದಾರ ಉಪಸ್ಥಿತರಿದ್ದರು. ಸುನೀಲ ರಾಠೋಡ ಪ್ರಾಸ್ತವಿಕವಾಗಿ ಮಾತನಾಡಿದರು, ಎನ್.ಎಸ್.ಹೂಗಾರ ಸ್ವಾಗತಿಸಿದರು. ರಾಜು ಬಿರಾದಾರ ನಿರೂಪಿಸಿದರು. ಡಾ. ಅಮರೇಶ ಮಿಣಜಗಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News