ಬಸವಾತ್ಮಜೆ ಪ್ರಶಸ್ತಿಗೆ ಬಿ.ಟಿ.ಲಲಿತಾ ನಾಯಕ್ ಆಯ್ಕೆ

Update: 2020-01-10 14:13 GMT

ಬಾಗಲಕೋಟೆ, ಜ. 10: ಕೂಡಲಸಂಗಮದ ಬಸವಧರ್ಮ ಪೀಠ ಮಾತೆ ಮಹಾದೇವಿ ಹೆಸರಿನಲ್ಲಿ ಈ ವರ್ಷದಿಂದ ಆರಂಭ ಮಾಡಿರುವ ಬಸವಾತ್ಮಜೆ ಪ್ರಶಸ್ತಿಯನ್ನು ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್‌ರನ್ನು ಆಯ್ಕೆ ಮಾಡಲಾಗಿದೆ.

ಕೂಡಲಸಂಗಮದಲ್ಲಿ ನಡೆಯುವ ಶರಣ ಮೇಳ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿಯು 51 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕಗಳನ್ನು ಒಳಗೊಂಡಿದೆ ಎಂದು ಪೀಠದ ಅಧ್ಯಕ್ಷೆ ಮಾತೆ ಗಂಗಾದೇವಿ ಇಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಇದೇ ವೇಳೆ ಬೆಂಗಳೂರಿನ ಎನ್.ಪುಟ್ಟರುದ್ರ ಹಾಗೂ ಬೀದರ್‌ನ ಕಾಶಪ್ಪ ಧನ್ನೂರ ಅವರಿಗೆ ಶರಣ ಕಾಯಕರತ್ನ, ಹಿರಿಯ ವಕೀಲ ಜೈರಾಮ್‌ಗೆ ಕ್ರೀಡಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News