ಸಾಹಿತ್ಯ ಸಮ್ಮೇಳನದ ನಾಳಿನ ಕಾರ್ಯಕ್ರಮ ರದ್ದು: ಕಸಾಪ ಜಿಲ್ಲಾಧ್ಯಕ್ಷ ಅಶೋಕ್

Update: 2020-01-10 16:10 GMT

ಚಿಕ್ಕಮಗಳೂರು, ಜ.10: ತೀವ್ರ ವಿರೋಧದ ನಡುವೆ ಶುಕ್ರವಾರ ಶೃಂಗೇರಿ ಪಟ್ಟಣದಲ್ಲಿ ನಡೆದ 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳದನ ಉದ್ಘಾಟನಾ ಕಾರ್ಯಕ್ರಮ ಯಶಸ್ವಿಯಾದ ಬೆನ್ನಲ್ಲೇ ಸಮ್ಮೇಳನದ ಎರಡನೇ ದಿನದ ಕಾರ್ಯಕ್ರಮವನ್ನು ರದ್ದು ಪಡಿಸಲಾಗಿದೆ. 

ಈ ಸಂಬಂಧ ವಾರ್ತಾಭಾರತಿಯೊಂದಿಗೆ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ಕುಂದೂರು ಅಶೋಕ್, ಸಮ್ಮೇಳನಕ್ಕೆ ಮೈಕ್ ಅನುಮತಿ ನೀಡಲು ಪೊಲೀಸ್ ಇಲಾಖೆ ನಿರಾಕರಿಸಿದೆ. ಆದರೂ ಶುಕ್ರವಾರದ ಕಾರ್ಯಕ್ರಮ ಪೊಲೀಸರ ಸಹಕಾರದಲ್ಲೇ ನಡೆದಿದ್ದು, ಬಹಿರಂಗ ಸಮ್ಮೇಳನಕ್ಕೆ ಮೈಕ್ ಬಳಸಲು ಪೊಲೀಸರು ಅನುಮತಿ ನೀಡಿಲ್ಲ. ಆದ್ದರಿಂದ ಶುಕ್ರವಾರ ಒಂದು ಗೋಷ್ಠಿ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆದಿಚುಂಚನಗಿರಿ ಸಭಾ ಭವನದ ಒಳಾಂಗಣದ ಸಭಾಂಗಣದಲ್ಲಿ ನಡೆಸಲಾಗಿದೆ. ನಾಳೆಯೂ ಇಲ್ಲೇ ಕಾರ್ಯಕ್ರಮ ನಡೆಸಲು ಸಾಧ್ಯವಾಗದ ಕಾರಣ, ನಾಳಿನ ಕಾರ್ಯಕ್ರಮಗಳನ್ನು ಸದ್ಯಕ್ಕೆ ಮುಂದೂಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News