ಖಾಸಗಿ ವೀಡಿಯೊ ಮುಂದಿಟ್ಟು ಯುವತಿಯ ಬ್ಲಾಕ್‌ಮೇಲ್: ಆರೋಪಿ ಬಿಜೆಪಿ ಯುವ ಮುಖಂಡನ ಸೆರೆ

Update: 2020-01-12 05:38 GMT

ಹುಬ್ಬಳ್ಳಿ, ಜ.12: ತಾನು ಪ್ರೀತಿಸುತ್ತಿದ್ದ ಸೋದರ ಸಂಬಂಧಿ ತಂಗಿಯ ಜೊತೆ ವಿವಾಹ ಮಾಡಿಕೊಡದಿದ್ದಲ್ಲಿ ಆಕೆಯೊಂದಿಗಿನ ಖಾಸಗಿ ವೀಡಿಯೊ, ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಸುತ್ತಿದ್ದ ಆರೋಪದಲ್ಲಿ ಯುವಕನೋರ್ವನನ್ನು ಹುಬ್ಬಳ್ಳಿ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

ಪಾಂಡಿಚೇರಿ ಮೂಲದ ರಾಖಿ ಬಂಧಿತ ಆರೋಪಿ. ಈತ ಬಿಜೆಪಿ ಯುವ ಮುಖಂಡ ಎಂದು ತಿಳಿದುಬಂದಿದೆ. ಈತ ಹುಬ್ಬಳ್ಳಿಯಲ್ಲಿರುವ ತನ್ನ ಸಂಬಂಧಿಕ ಯುವತಿಯನ್ನು ಪ್ರೀತಿಸುತ್ತಿದ್ದನೆನ್ನಲಾಗಿದೆ. ಆದರೆ ಸೋದರ ಸಂಬಂಧಿಯಾಗಿರುವ ಕಾರಣ ಈಕೆಯನ್ನು ರಾಖಿಗೆ ವಿವಾಹ ಮಾಡಿಕೊಡಲು ಯುವತಿಯ ಹೆತ್ತವರು ನಿರಾಕರಿಸಿದ್ದರು. ಆಕೆಯನ್ನು ಮದುವೆ ಮಾಡಿಕೊಡದಿದ್ದಲ್ಲಿ ಆಕೆಯ ಜೊತೆಗಿನ ಖಾಸಗಿ ಪೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಯುವತಿಯನ್ನು ಕುಟುಂಬಸ್ಥರನ್ನು ರಾಖಿ ಬ್ಲಾಕ್‌ಮೇಲ್ ಮಾಡುತ್ತಿದ್ದನೆನ್ನಲಾಗಿದೆ. ಅಲ್ಲದೆ ಕೆಲವೊಂದು ವೀಡಿಯೋ, ಫೋಟೊಗಳನ್ನು ಯುವತಿಯ ತಂದೆಯ ಮೊಬೈಲ್ ಫೋನ್‌ಗೂ ರವಾನಿಸಿದ್ದನೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಯುವತಿಯ ತಂದೆ ಹುಬ್ಬಳ್ಳಿ ಧಾರವಾಡ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

 ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News