ಪೇಜಾವರ ಶ್ರೀ ಸಾವನ್ನಪ್ಪಿದಾಗ ಕೊರಗರು ತಯಾರಿಸಿದ ಬುಟ್ಟಿಯಲ್ಲಿ ಏಕೆ ಕೊಂಡೊಯ್ದರು ?

Update: 2020-01-12 17:24 GMT

ಮೈಸೂರು, ಜ.12: ಪೇಜಾವರ ಶ್ರೀಗಳು ಸಾವನ್ನಪ್ಪಿದಾಗ ಬುಟ್ಟಿಯಲ್ಲಿ ಕುಳ್ಳಿರಿಸಿಕೊಂಡು ಹೊತ್ತುಕೊಂಡು ಹೋಗಲಾಯಿತು. ದೇಶದಲ್ಲಿ ಒಡೆದು ಆಳುವ ನೀತಿಯನ್ನು ಅನುಸರಿಸುವ ಬ್ರಾಹ್ಮಣರು ಯಾಕೆ ಕೊರಗ ಸಮಾಜದವರು ತಯಾರು ಮಾಡಿದ ಬುಟ್ಟಿಯಲ್ಲಿ ಪೇಜಾವರ ಶ್ರೀಯನ್ನು ಹೊತ್ತುಕೊಂಡು ಹೋದರು ಎಂದು ಪ್ರಗತಿಪರ ಚಿಂತಕ ಮಹೇಂದ್ರ ಕುಮಾರ್ ಪ್ರಶ್ನಿಸಿದರು.

ನಂಜನಗೂಡಿನ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ನಗರದ ಅಂಬೇಡ್ಕರ್ ಭವನದಲ್ಲಿ ರವಿವಾರ 'ಭೀಮಾ ಕೋರೆಗಾಂವ್' ವಿಜಯೋತ್ಸವದ ಅಂಗವಾಗಿ ಆಯೋಜಿಸಿದ್ದ ಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.

ಕೊರಗ ಸಮಾಜ ಎಂದರೆ ದಲಿತರು, ಅವರು ಮಾಡಿದ ಬುಟ್ಟಿಗೆ ಶ್ರೇಷ್ಠತೆಯನ್ನು ಕೊಡುತ್ತೀರಿ. ದಲಿತರನ್ನು ಕೀಳು ಎನ್ನುವ ನಿಮಗೆ ಯಾವುದು ಶ್ರೇಷ್ಠತೆ? ಬುಟ್ಟಿಗೆ ಕೊಡುವ ಶ್ರೇಷ್ಠತೆಯನ್ನು ದಲಿತರಿಗೂ ಕೊಡಿ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News