85ನೇ ಕನ್ನಡ ಸಾಹಿತ್ಯ ಸಮ್ಮೇಳನ: ರಾಜ್ಯದ ದೃಶ್ಯ ಕಲಾವಿದರಿಂದ ಕಲಾಕೃತಿ ಆಹ್ವಾನ

Update: 2020-01-13 16:57 GMT

ಬೆಂಗಳೂರು, ಜ.13: ಕಲಬುರಗಿಯಲ್ಲಿ ಫೆ.5, 6 ಹಾಗೂ 7ರಂದು ನಡೆಯಲಿರುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ರಾಜ್ಯದ ದೃಶ್ಯ ಕಲಾವಿದರಿಗಾಗಿ ಕಲಾ ಸ್ಪರ್ಧೆ ಆಯೋಜಿಸಲಾಗಿದ್ದು, ರಾಜ್ಯಮಟ್ಟದ ಚಿತ್ರ, ಶಿಲ್ಪಹಾಗೂ ಛಾಯಾಚಿತ್ರ ಕಲೆ ಸ್ಪರ್ಧೆ ಹಾಗೂ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದ್ದು, ಇದಕ್ಕಾಗಿ ಅರ್ಹ ಕಲಾವಿದರಿಂದ ಕಲಾಕೃತಿಗಳನ್ನು ಆಹ್ವಾನಿಸಲಾಗಿದೆ.

ಕಲಾಕೃತಿಗಳನ್ನು ಡ್ರಾಯಿಂಗ್, ಪೇಂಟಿಂಗ್ ಹಾಗೂ ಗ್ರಾಫಿಕ್ ಪ್ರಕಾರಗಳಲ್ಲಿ ರಚನೆಯಾಗಿರಬೇಕು. ಕಲಾಕೃತಿಗಳು ಜಲವರ್ಣ, ತೈಲವರ್ಣ, ಡ್ರಾಯಿಂಗ್ ಅಥವಾ ಮಿಶ್ರ ಮಾಧ್ಯಮಗಳಲ್ಲಿ ಒಂದಾಗಿರಬೇಕು. ಕಲಾಕೃತಿ ಅಳತೆಯು 3*3 ಅಡಿ ಮೀರಿರಬಾರದು. 1*1 ಅಡಿಗಿಂತ ಕಡಿಮೆ ಇರಬಾರದು. ಕಲಾಕೃತಿಗಳನ್ನು ಸ್ಪರ್ಧೆಗೆ ತಲುಪಿಸುವ ಜವಾಬ್ದಾರಿ ಕಲಾವಿದರದಾಗಿದೆ. ಕಲಾಕೃತಿಯು ಸುಂದರ ಫ್ರೇಮ್ ನೊಂದಿಗೆ ಸಲ್ಲಿಸಬೇಕು. ಕಲಾಕೃತಿಯ ಜೊತೆಗೆ ಕಲಾವಿದರ ಸ್ವವಿವರವುಳ್ಳ ಪರಿಚಯ ಪತ್ರ ಹಾಗೂ ಎರಡು ಭಾವಚಿತ್ರಗಳನ್ನು ಸಹ ನೀಡಬೇಕು.

ಈ ಕಲಾಕತಿಗಳನ್ನು ಆಯ್ಕೆ ಸಮಿತಿಯಿಂದ ಆಯ್ಕೆ ಮಾಡಲಾಗುತ್ತದೆ. ಒಟ್ಟು 10 ನಗದು ಪ್ರಶಸ್ತಿಗಳಿದ್ದು, ನೆನಪಿನ ಕಾಣಿಕೆ ಹಾಗೂ ಪ್ರಮಾಣಪತ್ರ ಒಳಗೊಂಡಿರುತ್ತದೆ. ಪ್ರದರ್ಶನದಲ್ಲಿ ಆಯ್ಕೆಯಾದ ಎಲ್ಲಾ ಕಲಾವಿದರಿಗೆ ಪ್ರಮಾಣ ಪತ್ರ ಹಾಗೂ ನೆನಪಿನ ಕಾಣಿಕೆಗಳನ್ನು ನೀಡಲಾಗುತ್ತದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News