×
Ad

ಖಾಸಗಿ ಬಸ್- ಮ್ಯಾಜಿಕ್ ಪ್ಯಾಸೆಂಜರ್ ನಡುವೆ ಅಪಘತ: 6 ಮಂದಿಗೆ ಗಾಯ

Update: 2020-01-13 23:29 IST

ಕೊಳ್ಳೇಗಾಲ, ಜ.13: ಖಾಸಗಿ ಬಸ್ ಹಾಗೂ ಟಾಟಾ ಮ್ಯಾಜಿಕ್ ಪ್ಯಾಸೆಂಜರ್ ವಾಹನಗಳ ನಡುವೆ ಸಂಭವಿಸಿದ ಮುಖಾಮುಖಿ ಢಿಕ್ಕಿಯಿಂದ ಗೂಡ್ಸ್ ವಾಹನದಲ್ಲಿದ್ದ 6 ಮಂದಿ ಗಂಭೀರ ಗಾಯಗೊಂಡಿರುವ ಘಟನೆ ತಾಲೂಕಿನ ಚಿಕ್ಕಿಂದುವಾಡಿ ಮುಖ್ಯ ರಸ್ತೆ ಬಳಿ ನಡೆದಿದೆ.

ಯಳಂದೂರು ತಾಲೂಕಿನ ಮಾಂಬಳ್ಳಿ ಗ್ರಾಮದ ಈಶ್ವರ್(39) ಸುಮಾ(30) ಸಾಗರ್(13) ಸ್ಪಂದನ್(11) ಹಾಗೂ ಸಿದ್ದಯ್ಯನಪುರ ಗ್ರಾಮದ ಮಹಾದೇವ (52) ಹಾಗೂ ಮಂಜುಳ(43) ಅಪಘಾತದಲ್ಲಿ ಗಾಯಗೊಂಡವರು. 

ಹನೂರು ಕಡೆಯಿಂದ ಬರುತ್ತಿದ್ದ ರಾಜರಾಜೇಶ್ವರಿ ಖಾಸಗಿ ಬಸ್ ಹಾಗೂ ಹನೂರು ಕಡೆಗೆ ಹೋಗುತ್ತಿದ್ದ ಟಾಟಾ ಮ್ಯಾಜಿಕ್ ಪ್ಯಾಸೆಂಜರ್ ವಾಹನ ನಡುವೆ ಈ ಅಪಘಾತ ಸಂಭವಿಸಿದೆ.

ಘಟನಾ ಸ್ಥಳಕ್ಕೆ ಗ್ರಾಮಾಂತರ ಠಾಣೆಯ ಪಿಎಸ್‍ಐ ವಿ.ಸಿ.ಅಶೋಕ್ ಭೇಟಿ ನೀಡಿ ಗಾಯಗಳುಗಳನ್ನು ಉಪವಿಭಾಗ ಆಸ್ಪತ್ರೆಗೆ ಪೊಲೀಸ್ ಹಾಗೂ ಖಾಸಗಿ ವಾಹನಗಳಿಂದ ಸಾಗಿಸಿ ಚಿಕಿತ್ಸೆ ಕೊಡಿಸಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳುಗಳನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಕಳುಹಿಸಲಾಯಿತು. ಅಪಘಾತ ವೇಳೆ ಟ್ರಾಫಿಕ್ ಸಮಸ್ಯೆ ಉಂಟಾಗಿ ಸುಮಾರು ಒಂದು ಕೀ.ಮೀ ಉದ್ದಕ್ಕೆ ವಾಹನಗಳ ಸಂಚಾರ ಅಸ್ಥವ್ಯಸ್ಥಗೊಂಡಿತ್ತು. 

ಘಟನೆ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News