'ಫ್ರೀ ಕಾಶ್ಮೀರ್' ಭಿತ್ತಿ ಪತ್ರ ಪ್ರದರ್ಶನ: ಯುವತಿ ಪರ ವಕಾಲತ್ತು ವಹಿಸದಿರಲು ವಕೀಲರ ನಿರ್ಧಾರ
Update: 2020-01-14 22:48 IST
ಮೈಸೂರು,ಜ.14: ಜೆಎನ್‍ಯು ವಿದ್ಯಾರ್ಥಿಗಳ ಮೇಲಿನ ಹಲ್ಲೆ ಖಂಡಿಸಿ ನಗರದ ಮಾನಸ ಗಂಗೋತ್ರಿ ಕ್ಯಾಂಪಸ್‍ನಲ್ಲಿ ನಡದ ಪ್ರತಿಭಟನೆ ವೇಳೆ 'ಫ್ರೀ ಕಾಶ್ಮೀರ್' ಭಿತ್ತಿ ಪತ್ರ ಹಿಡಿದಿದ್ದ ಯುವತಿ ನಳಿನಿ ಪರ ವಕಾಲತ್ತು ಹಾಕದಿರಲು ಮೈಸೂರು ವಕೀಲರ ವಿವಿಧೋದ್ದೇಶ ಸಹಕಾರ ಸಂಘ ನಿರ್ಧಾರ ಮಾಡಿದ ಹಿನ್ನೆಲೆಯಲ್ಲಿ ನಳಿನಿ ಕೋರ್ಟ್ ಆವರಣದಲ್ಲೇ 'ನೋ ಹ್ಯೂಮಾನಿಟಿ' ಎಂದು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.
ನಗರದ ನ್ಯಾಯಾಲಯಕ್ಕೆ ತನ್ನ ತಾಯಿ ಜೊತೆ ನಳಿನಿ ಇಂದು ಆಗಮಿಸಿದಳು. ಆದರೆ ಮೈಸೂರು ವಕೀಲರ ವಿವಿಧೋದ್ದೇಶ ಸಹಕಾರ ಸಂಘ ತನ್ನ ಪರ ವಕಾಲತ್ತು ಹಾಕದಿರಲು ನಿರ್ಧರಿಸಿದ್ದನ್ನು ಅರಿತ ನಳಿನಿ ಕೋರ್ಟ್ ಆವರಣದಲ್ಲೇ ಆಕ್ರೋಶ ವ್ಯಕ್ತಪಡಿಸಿದ್ದಾಳೆ.
ವಕೀಲರ ವಿವಿದ್ಧೋದ್ದೇಶ ಸಹಕಾರ ಸಂಘದವರು ನಳಿನಿ ಅವರ ಪರ ವಕಾಲತ್ತು ವಹಿಸಬಾರದು ಎಂಬ ಆದೇಶ ಹೊರಡಿಸಿರುವುದರಿಂದ ಬೇಸರಗೊಂಡ ನಳಿನಿ ಇಲ್ಲಿ ಯಾರಿಗೂ ಮಾನವೀಯತೆ ಇಲ್ಲ ಎಂದು ಕೂಗಾಡಿದಳು ಎನ್ನಲಾಗಿದೆ.