×
Ad

ವ್ಯಂಗ್ಯಚಿತ್ರ ಪ್ರಶಸ್ತಿಗೆ ಆಹ್ವಾನ

Update: 2020-01-15 00:01 IST

ಬೆಂಗಳೂರು, ಜ.14: ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆಯು 12ನೇ ಮಾಯಾ ಕಾಮತ್ ಸ್ಮಾರಕ ವ್ಯಂಗ್ಯಚಿತ್ರ ಪ್ರಶಸ್ತಿಗೆ ವ್ಯಂಗ್ಯಚಿತ್ರಗಳನ್ನು ಆಹ್ವಾನಿಸಿದೆ.

ವ್ಯಂಗ್ಯಚಿತ್ರ ಕಳುಹಿಸುವವರು ಜ.1ರಿಂದ ಡಿ.31ರವರೆಗೆ ಪ್ರಕಟವಾದ ಗರಿಷ್ಠ 3 ರಾಜಕೀಯ ವ್ಯಂಗ್ಯಚಿತ್ರಗಳನ್ನು ಕಳುಹಿಸಬಹುದಾಗಿದೆ.

ಉತ್ತಮ ರಾಜಕೀಯ ವ್ಯಂಗ್ಯಚಿತ್ರಕ್ಕೆ ಪ್ರಥಮ ಬಹುಮಾನ 25 ಸಾವಿರ ರೂ. ದ್ವಿತೀಯ ಬಹುಮಾನ 15 ಸಾವಿರ ರೂ. ಹಾಗೂ ತೃತೀಯ ಬಹುಮಾನ 5 ಸಾವಿರ ರೂ. ಒಳಗೊಂಡಿದೆ. ಅಲ್ಲದೇ, ವಿದೇಶಿ ವ್ಯಂಗ್ಯಚಿತ್ರಕಾರರಿಗೆ ಮೊದಲ ಬಹುಮಾನ 200 ಡಾಲರ್, ದ್ವಿತೀಯ ಬಹುಮಾನ 100 ಡಾಲರ್ ಮತ್ತು ಉದಯೋನ್ಮಖ ವ್ಯಂಗ್ಯಚಿತ್ರಗಾರರಿಗೆ 10 ಸಾವಿರ ರೂ. ನೀಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News