ಅರ್ಧ ಕಾಶ್ಮೀರವನ್ನು ಪಾಕಿಸ್ತಾನಕ್ಕೆ 'ಸೇರಿಸಿದ' ಸಿಎಎ ಪರ ಕಾರ್ಯಕ್ರಮದ ಬ್ಯಾನರ್!

Update: 2020-01-17 15:00 GMT

ಮಂಗಳೂರು: ಇಂದು ಚಿಕ್ಕಮಗಳೂರಿನಲ್ಲಿ ಸಂಸದೆ ಶೋಭಾ ಕರಂದ್ಲಾಜೆಯವರ ನೇತೃತ್ವದಲ್ಲಿ ನಡೆದ ಸಿಎಎ ಪರ ಕಾರ್ಯಕ್ರಮದ ಬ್ಯಾನರ್ ಒಂದು ಭಾರೀ ವಿವಾದ ಸೃಷ್ಟಿಸಿದೆ. ಈ ಬ್ಯಾನರ್ ನಲ್ಲಿ ಅರ್ಧ ಕಾಶ್ಮೀರವನ್ನು ಪಾಕಿಸ್ತಾನದ ಭಾಗ ಎಂದು ತೋರಿಸಿರುವುದು ಭಾರೀ ಆಕ್ರೋಶಕ್ಕೆ ಗುರಿಯಾಗಿದೆ.

ಇಂದು ಚಿಕ್ಕಮಗಳೂರಿನಲ್ಲಿ ಪೌರತ್ವ ಕಾಯ್ದೆ ಪರ ರಾಷ್ಟ್ರ ಜಾಗರಣ ಸಮಿತಿ ನೇತೃತ್ವದಲ್ಲಿ ಜಾಗೃತ ಸಮಾವೇಶ ನಡೆದಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶೋಭಾ ಕರಂದ್ಲಾಜೆ ಈ ಬಗ್ಗೆ ಟ್ವೀಟ್ ಒಂದನ್ನು ಮಾಡಿದ್ದರು.

"ಚಿಕ್ಕಮಗಳೂರಿನಲ್ಲಿ ಸಿಎಎಗೆ ಭಾರೀ ಬೆಂಬಲ. ಚಿಕ್ಕಮಗಳೂರಿನಲ್ಲಿ ರಾಷ್ಟ್ರ ಜಾಗರಣ ಸಮಿತಿಯಿಂದ ಸಿಎಎ ಜನಜಾಗರಣ್ ನಲ್ಲಿ ಭಾಗವಹಿಸಿದ್ದೆ" ಎಂದು ಶೋಭಾ ಕರಂದ್ಲಾಜೆ ಟ್ವೀಟ್ ಮಾಡಿದ್ದರು. ಈ ಟ್ವೀಟ್ ನಲ್ಲಿದ್ದ ಫೋಟೊಗಳನ್ನು ಟ್ವಿಟರಿಗರು ಗಮನಿಸಿದ್ದು, ಕಾರ್ಯಕ್ರಮದ ಬ್ಯಾನರ್ ಗಳಲ್ಲಿ ಅರ್ಧ ಕಾಶ್ಮೀರವನ್ನು ಪಾಕಿಸ್ತಾನದ ಭಾಗ ಎಂದು ಚಿತ್ರಿಸಲಾಗಿತ್ತು. ಈ ಬಗ್ಗೆ ಟ್ವಿಟರಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ನಮ್ಮ ಕಾಶ್ಮೀರವನ್ನು ಪಾಕಿಸ್ತಾನದ ಭಾಗವನ್ನಾಗಿಸಲಾಗಿದ್ದು ಏಕೆ? ಇದು ಅಪರಾಧವಲ್ಲವೇ?, 7 ವರ್ಷ ಜೈಲು ಮತ್ತು 100 ಕೋಟಿ ರೂ. ದಂಡ!", "ಇದು ಅನೈತಿಕ" ಎಂದು ಟ್ವಿಟರಿಗರು ಆಕ್ರೋಶ ವ್ಯಕ್ತಪಡಿಸಿದ್ದು, ಕೆಲವು ಟ್ವೀಟ್ ಗಳು ಈ ಕೆಳಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News