ಚೀನಾದ ತಲಾವಾರು ಆದಾಯದಲ್ಲಿ ಭಾರೀ ಏರಿಕೆ

Update: 2020-01-18 16:29 GMT

ಬೀಜಿಂಗ್, ಜ. 18: ಚೀನಾದ ತಲಾವಾರು ಆದಾಯ 2019ರಲ್ಲಿ 10,276 ಡಾಲರ್ (ಸುಮಾರು 7.30 ಲಕ್ಷ ರೂಪಾಯಿ) ತಲುಪಿದೆ ಎಂದು ರಾಷ್ಟ್ರೀಯ ಅಂಕಿಅಂಶಗಳ ಸಂಸ್ಥೆ ಬಿಡುಗಡೆ ಮಾಡಿರುವ ಅಂಕಿಸಂಖ್ಯೆಗಳು ತಿಳಿಸಿವೆ. ಚೀನಾದ ತಲಾವಾರು ಆದಾಯ (ಓರ್ವ ವ್ಯಕ್ತಿಯ ಒಂದು ವರ್ಷದ ಆದಾಯ) 10,000 ಡಾಲರ್ ಗಡಿಯನ್ನು ದಾಟಿರುವುದು ಇದೇ ಮೊದಲ ಬಾರಿಯಾಗಿದೆ.

2018ರಲ್ಲಿ ಚೀನಾದ ತಲಾವಾರು ಆದಾಯ 9,771 ಡಾಲರ್ (6.94 ಲಕ್ಷ ರೂಪಾಯಿ) ಆಗಿತ್ತು. ಇದರೊಂದಿಗೆ ಒಂದು ವರ್ಷದಲ್ಲಿ ಅದು 5.2 ಶೇಕಡ ಬೆಳವಣಿಗೆಯನ್ನು ಸಾಧಿಸಿದೆ.

ಭಾರತದ ತಲಾವಾರು ಆದಾಯ 2019ರಲ್ಲಿ 1.45 ಲಕ್ಷ ರೂಪಾಯಿ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News