ಕಲಬುರಗಿಗೆ ನಾಳೆ ಕ್ರಿಕೆಟ್ ಆಟಗಾರ ಜಾಂಟಿ ರೋಡ್ಸ್, ಮೊಹಮ್ಮದ್ ಅಜರುದ್ದೀನ್ ಆಗಮನ
Update: 2020-01-18 23:19 IST
ಕಲಬುರಗಿ: ಡಿ.31 ರಂದು ಪ್ರಾರಂಭವಾದ ಖ್ವಾಜಾ ಬಂದೇನವಾಜ್ ಪ್ರೀಮಿಯರ್ ಲೀಗ್ ಸೀಸನ್ 3 ಫೈನಲ್ ಪಂದ್ಯ ಭಾನುವಾರ 1 ಗಂಟೆಗೆ ನಗರದ ದರ್ಗಾ ರಸ್ತೆಯಲ್ಲಿರುವ ಸೈಯದ್ ಅಕ್ಬರ್ ಹುಸೇನಿ ಟರ್ಫ್ ಮೈದಾನದಲ್ಲಿ ನಡೆಯಲಿದ್ದು, ಈ ಸಂದರ್ಭದಲ್ಲಿ ಕೆಬಿಎನ್ ಪ್ರೀಮಿಯರ್ ಲೀಗ್ ರಾಯಭಾರಿ ಮೊಹಮ್ಮದ್ ಅಜರುದ್ದೀನ್ ಮತ್ತು ದಕ್ಷಿಣ ಆಫ್ರಿಕಾದ ಕ್ರಿಕೆಟ್ ಆಟಗಾರ ಜಾಂಟಿ ರೋಡ್ಸ್ ಆಗಮಿಸಿಲಿದ್ದಾರೆಂದು ಕೆ.ಬಿ.ಎನ್ ಪ್ರೀಮಿಯರ್ ಲೀಗ್ ಮುಖ್ಯಸ್ಥ, ಖ್ವಾಜಾ ಬಂದೇನವಾಜ್ ದರ್ಗಾದ ಪೀಠಾಧಿಪತಿ ಡಾ. ಸೈಯದ್ ಶಾ ಖಸ್ರೋ ಹುಸೈನಿ ಅವರು ತಿಳಿಸಿದ್ದಾರೆ.
ನಾಳೆ 1 ಗಂಟೆಗೆ ಸ್ಟೇಷನ್ ಈಗಲ್ ಮತ್ತು ಮಾರ್ಕೆಟ್ ಸೂಪರ್ ಕಿಂಗ್ ನಡುವೆ ಫೈನಲ್ ಪಂದ್ಯಾಟ ನಡೆಯಲಿದೆ. ಈ ಸಂದರ್ಭದಲ್ಲಿ ಪ್ರಮುಖರು ಗಣ್ಯರು ಹಾಗೂ ಸೇರಿ ಹಲವರು ಭಾಗವಹಿಸಲಿದ್ದಾರೆಂದು ಪ್ರಕಟನೆ ತಿಳಿಸಿದೆ.