ರಾಜ್ಯದಲ್ಲಿ ನೂತನ 100 ಎನ್‌ಸಿಡಿ ಕ್ಲಿನಿಕ್ ಗಳಿಗೆ ಕೇಂದ್ರ ಸರಕಾರ ಅನುಮೋದನೆ

Update: 2020-01-19 18:37 GMT

ಬೆಂಗಳೂರು, ಜ.19: ಕರ್ನಾಟಕ ವ್ಯಾಪ್ತಿಯಲ್ಲಿ ನೂತನವಾಗಿ 100 ಎನ್‌ಸಿಡಿ ಕ್ಲಿನಿಕ್‌ಗಳನ್ನು (ಸಾಂಕ್ರಾಮಿಕವಲ್ಲದ ರೋಗಗಳಿಗೆ ಚಿಕಿತ್ಸೆ) ಪ್ರಾರಂಭಿಸಲು ಕೇಂದ್ರ ಸರಕಾರ ಅನುಮೋದನೆ ನೀಡಿದೆ. 

ಸದ್ಯ ರಾಜ್ಯದಲ್ಲಿ 30 ಜಿಲ್ಲಾ ಮಟ್ಟದ ಹಾಗೂ 243 ತಾಲೂಕು ಮಟ್ಟದ ಎನ್‌ಸಿಡಿ ಕ್ಲಿನಿಕ್‌ಗಳು ಇವೆ. ಮಧುಮೇಹ, ರಕ್ತದೊತ್ತಡ, ಮೂತ್ರಪಿಂಡ ಸಮಸ್ಯೆ, ಕ್ಯಾನ್ಸರ್, ಹೃದಯ ಕಾಯಿಲೆಗಳಿಗೆ ಇಲ್ಲಿ ತಪಾಸಣೆ ನಡೆಸಿ, ಚಿಕಿತ್ಸೆ ನೀಡಲಾಗುತ್ತದೆ. ಏಪ್ರಿಲ್‌ನಿಂದ ಕ್ಲಿನಿಕ್‌ಗಳ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ಇಲಾಖೆ ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News