ಕೆಪಿಎಸ್ಸಿ: ಆಯ್ಕೆಪಟ್ಟಿ ಪ್ರಕಟ

Update: 2020-01-21 12:49 GMT

ಬೆಂಗಳೂರು, ಜ.21: ಕೆಪಿಎಸ್ಸಿ 2018ರ ಮಾರ್ಚ್ ಮತ್ತು ಡಿಸೆಂಬರ್‌ನಲ್ಲಿ ಅಧಿಸೂಚನೆ ಹೊರಡಿಸಿ, ನೇಮಕಾತಿ ಪ್ರಕ್ರಿಯೆ ನಡೆಸಿದ್ದ ವಿವಿಧ 19 ಹುದ್ದೆಗಳಿಗೆ ಸಂದರ್ಶನ ಮತ್ತು ಮೂಲ ದಾಖಲೆಗಳ ಪರಿಶೀಲನೆಗೆ ಆಯ್ಕೆ ಪಟ್ಟಿ ಪ್ರಕಟಿಸಿದೆ.

ಕರ್ನಾಟಕ ಲೋಕಸೇವಾ ಆಯೋಗವು, ಎಂಡಿಆರ್‌ಎಸ್ ಮತ್ತು ಎಂಎಂಆರ್‌ಎಸ್‌ನ ವಿವಿಧ ವಿಷಯಗಳ ಉಪನ್ಯಾಸಕ ಹುದ್ದೆಗಳು, ಪ್ರಾಂಶುಪಾಲ ಹುದ್ದೆಗಳು, ಹಾಗೂ ಸಹಾಯಕ ಜನರಲ್ ಮ್ಯಾನೇಜರ್ ಹುದ್ದೆಗಳಿಗೆ ಸಂದರ್ಶನ ಮತ್ತು ಮೂಲ ದಾಖಲೆಗಳ ಪರಿಶೀಲನೆಗೆ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಒಟ್ಟು 19 ವಿವಿಧ ಹುದ್ದೆಗಳಿಗೆ 1:3 ಅನುಪಾತದಲ್ಲಿ ಅಭ್ಯರ್ಥಿಗಳ ಹೆಸರು ಮತ್ತು ರಿಜಿಸ್ಟರ್ ನಂಬರ್‌ಅನ್ನು ಸಂದರ್ಶನಕ್ಕೆ ಆಯ್ಕೆಯಾದ ಅಭ್ಯರ್ಥಿಗಳ ಅರ್ಹತಾ ಪಟ್ಟಿಯಲ್ಲಿ ಪರಿಶೀಲನೆ ಮಾಡಬಹುದಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News