ಸಿಎಎ ಕಾಯ್ದೆ 130 ಕೋಟಿ ಜನರಿಗೆ ವಿರುದ್ಧವಾದದು: ಕುಮಾರಸ್ವಾಮಿ

Update: 2020-01-21 17:26 GMT

ಕಲಬುರಗಿ, ಜ.21: ಕೇಂದ್ರದ ದಮನಕಾರಿ ಕಾಯ್ದೆಗಳು ಕೇವಲ ಮುಸ್ಲಿಮರ ವಿರುದ್ಧ ಕೈಗೊಂಡಿರುವ ಕಾಯ್ದೆಯಲ್ಲ, ಇದು 130 ಕೋಟಿ ಜನರ ವಿರುದ್ಧ ಇರುವ ವಿಧೇಯಕವಾಗಿವೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.

ಮಂಗಳವಾರ ಸಿಎಎ ನಿರೋಧಿಸಿ ನಗರದಲ್ಲಿ ಆಯೋಜಿಸಿದ್ದ ಬೃಹತ್ ಪ್ರತಿಭಟನಾ ಸಭೆ ಮಾತನಾಡಿದ ಅವರು, ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಗೋಲಿಬಾರ್ ಹಾಗೂ ಬಾಂಬ್ ಪತ್ತೆ ಪ್ರಕರಣದ ಹೊಣೆಯನ್ನು ಸರಕಾರ ಹೊರಬೇಕಾಗಿದೆ ಎಂದರು.

ಶಾಸಕಿ ಕನೀಝ್ ಫಾತಿಮಾ ಮಾತನಾಡಿ, ದೇಶದಲ್ಲಿ ಬಿಜೆಪಿ ಸರಕಾರ ಆಡಳಿತ ನಡೆಸುತ್ತಿಲ್ಲ. ಬದಲಿಗೆ, ನಾಗಾಪುರದ ಆರೆಸ್ಸೆಸ್ ಕೇಂದ್ರ ಕಚೇರಿ ನಡೆಸುತ್ತಿದೆ ಎಂದು ಆರೋಪಿಸಿದರು.

ನಮ್ಮ ಜನಾಂದೋಲನ ದೇಶದ ಭಾವೈಕ್ಯತೆ ಕಾಪಾಡುವುದಾಗಿದೆ. ಕೇಂದ್ರದ ಜನ ವಿರೋಧಿ ಕಾಯ್ದೆಗಳ ವಿರುದ್ದ ನಮ್ಮ ಹೋರಾಟ ನಿಲ್ಲದು ಎಂದು ಅವರು ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News