ಚಿಕ್ಕಮಗಳೂರು ಜಿಲ್ಲೆಯಿಂದ ಹಜ್ ಯಾತ್ರೆಗೆ 92 ಮಂದಿ ಆಯ್ಕೆ: ಮೌಲಾನಾ ಕೆ.ಎಂ ಸಿದ್ದೀಕ್

Update: 2020-01-21 18:53 GMT

ಚಿಕ್ಕಮಗಳೂರು, ಜ.21: ಹಜ್ ಯಾತ್ರೆಗೆ ಜಿಲ್ಲೆಯಿಂದ 92 ಮಂದಿ ಆಯ್ಕೆಯಾಗಿದ್ದಾರೆ ಎಂದು ಜಯಪುರ ಮಸೀದಿ ಧರ್ಮಗುರು ಮೌಲಾನಾ ಕೆ.ಎಂ.ಅಬೂಬಕರ್ ಸಿದ್ದೀಕ್ ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಹಜ್ ಯಾತ್ರೆಗೆ ಜಿಲ್ಲೆಯಿಂದ 147 ಮಂದಿ ಅರ್ಜಿ ಸಲ್ಲಿಸಿದ್ದರು. ಜಿಲ್ಲೆಯಲ್ಲಿನ ಮುಸ್ಲಿಂ ಜನಸಂಖ್ಯೆಗೆ ಅನುಗುಣವಾಗಿ 80 ಮಂದಿಯನ್ನು ನಿಗದಿಪಡಿಸಲಾಗಿತ್ತು. ಆನ್‍ಲೈನ್ ಲಾಟರಿ ಮೂಲಕ 12 ಮಂದಿಯನ್ನು ಹೆಚ್ಚುವರಿಯಾಗಿ ಆಯ್ಕೆ ಮಾಡಲಾಗಿದೆ ಎಂದರು.

ಕೇಂದ್ರ ಸರಕಾರ ರಾಜ್ಯಕ್ಕೆ 6,734 ಕೋಟಿ ರೂ. ನಿಗದಿಪಡಿಸಿದ್ದು, ಮುಸ್ಲಿಮ್ ಜನಸಂಖ್ಯೆಯನ್ನು ಆಧರಿಸಿ ಪ್ರತೀ ಜಿಲ್ಲೆಗೂ ಸೌಲಭ್ಯ ನೀಡಲಾಗಿದೆ. ಇಡೀ ರಾಜ್ಯದಿಂದ 9,823 ಅರ್ಜಿಗಳು ಬಂದಿದ್ದು, 70 ವರ್ಷ ದಾಟಿದ ವೃದ್ಧರು ಮತ್ತು ಓರ್ವ ಸಹಾಯಕ ಸೇರಿ 459 ಮಂದಿ, 45 ವರ್ಷ ಮೀರಿದ 32 ಮಹಿಳೆಯರನ್ನು ನೇರವಾಗಿ ಆಯ್ಕೆ ಮಾಡಲಾಗಿದೆ. ಉಳಿದಂತೆ ಆನ್‍ಲೈನ್ ಡ್ರಾ ಮೂಲಕ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿರುವ ಅವರು, ರಾಜ್ಯದ ಹಜ್ ಯಾತ್ರಿಕರ ಪ್ರಯಾಣಕ್ಕಾಗಿ ಐದು ವಿಮಾನ ನಿಲ್ದಾಣಗಳನ್ನು ನಿಗದಿಪಡಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ 545 ಯಾತ್ರಾರ್ಥಿಗಳು ಸೇರಿದಂತೆ ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಉಡುಪಿ ಜಿಲ್ಲೆಗಳ 786 ಯಾತ್ರಿಕರು ಮಂಗಳೂರು ವಿಮಾನ ನಿಲ್ದಾಣದಿಂದ ಪವಿತ್ರ ಯಾತ್ರೆ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News