ಚೀನಾದಲ್ಲಿ ಕೊರೊನಾ ವೈರಸ್: 1,280 ಮಂದಿಗೆ ಸೋಂಕು, ಸಾವಿನ ಸಂಖ್ಯೆ 41ಕ್ಕೇರಿಕೆ

Update: 2020-01-25 04:38 GMT

ಬೀಜಿಂಗ್, ಜ.25: ಚೀನಾದಲ್ಲಿ ಕಾಣಿಸಿಕೊಂಡಿರುವ ಮಾರಣಾಂತಿಕ ಕೊರೊನಾ ವೈರಸ್ ಬಾಧಿತರ ಸಂಖ್ಯೆ 1,287ಕ್ಕೇರಿದೆ. ಅದೇ ರೀತಿ ಸಾವಿನ ಸಂಖ್ಯೆಯೂ 41ಕ್ಕೆ ತಲುಪಿದೆ. ಸಂತ್ರಸ್ತರಿಗೆ 1000 ಹಾಸಿಗೆಗಳ ಆಸ್ಪತ್ರೆ ನಿರ್ಮಿಸಲು ಮುಂದಾಗಿದೆ. ಚೀನಾದಾದ್ಯಂತ 29 ಪ್ರಾಂತ್ಯಗಳಲ್ಲಿ 237 ರೋಗಿಗಳ ಸ್ಥಿತಿ ಗಂಭೀರವಾಗಿದೆ. ಹುಬೈ ಪ್ರಾಂತ್ಯದಲ್ಲಿ 39 ಸಹಿತ ಚೀನಾದಲ್ಲಿ ಒಟ್ಟು 41 ಮಂದಿ ಸಾವನ್ನಪ್ಪಿದ್ದಾರೆ ಎಂದು ಆಯೋಗ ತಿಳಿಸಿದೆ.

 ಇದೇ ವೇಳೆ ಆಸ್ಟ್ರೇಲಿಯದಲ್ಲಿ ಶನಿವಾರ ಮೊದಲ ಕೊರೊನಾ ವೈರಸ್ ಪ್ರಕರಣ ದಾಖಲಾಗಿದೆ. ಕಳೆದ ವಾರ ಚೀನಾದಿಂದ ಮರಳಿರುವ 50ರ ವಯಸ್ಸಿನ ವ್ಯಕ್ತಿಗೆ ವೈರಸ್ ಕಾಣಿಸಿಕೊಂಡಿದೆ. ತನ್ನ ದೇಶದ ಮೂವರು ಪ್ರಜೆಗಳಿಗೆ ವೈರಸ್ ಕಾಣಿಸಿಕೊಂಡಿದೆ ಎಂದು ಫ್ರಾನ್ಸ್ ತಿಳಿಸಿದೆ. ಇದರೊಂದಿಗೆ ಯುರೋಪ್‌ನಲ್ಲ್ಲೂ ಮೊದಲ ಬಾರಿ ವೈರಸ್ ಕಾಣಿಸಿಕೊಂಡಿದೆ. ಅಮೆರಿಕದಲ್ಲೂ 2ನೇ ಪ್ರಕರಣ ವರದಿಯಾಗಿದ್ದು, ಚೀನಾದಿಂದ ಮರಳಿರುವ ಚಿಕಾಗೊದ 60ರ ವಯಸ್ಸಿನ ಮಹಿಳೆಗೆ ವೈರಸ್ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News