ರಾಜ್ಯದ 19 ಮಂದಿಗೆ ರಾಷ್ಟ್ರಪತಿ ಪ್ರಶಂಸನೀಯ ಸೇವಾ ಪದಕ

Update: 2020-01-25 16:04 GMT

ಬೆಂಗಳೂರು, ಜ. 25: ಗಣರಾಜ್ಯೋತ್ಸವ ಸಂದರ್ಭದಲ್ಲಿ ಉತ್ತಮ ಸೇವೆ ಸಲ್ಲಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ನೀಡುವ ಪ್ರತಿಷ್ಠಿತ ರಾಷ್ಟ್ರಪತಿ ಪ್ರಶಂಸನೀಯ ಪದಕಕ್ಕೆ ರಾಜ್ಯದ 19 ಮಂದಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಆಯ್ಕೆಯಾಗಿದ್ದಾರೆ.

ಗಣರಾಜ್ಯೋತ್ಸವದ ಮುನ್ನಾದಿನ ಕೇಂದ್ರ ಗೃಹ ಇಲಾಖೆ ಪ್ರಶಸ್ತಿ ಪುರಸ್ಕೃತರ ಪಟ್ಟಿ ಬಿಡುಗಡೆ ಮಾಡಿದ್ದು, ರಾಷ್ಟ್ರಪತಿಗಳ ಶೌರ್ಯ ಪದಕಕ್ಕೆ ನಾಲ್ವರು, ಪೊಲೀಸ್ ಶೌರ್ಯ ಪದಕಕ್ಕೆ 286, ವಿಶೇಷ ಸೇವಾ ಪದಕಕ್ಕೆ 93 ಮಂದಿ ಭಾಜನರಾಗಿದ್ದಾರೆ ಎಂದು ಗೊತ್ತಾಗಿದೆ.

ಬಿ.ಎನ್ ಓಬಳೇಶ್-ಎಸ್ಪಿ-ಬಿಎಂಟಿಎಫ್ ಬೆಂಗಳೂರು, ಕೆ.ಎಂ.ಮಹದೇವ ಪ್ರಸಾದ್-ಕಮಾಂಡೆಂಟ್ ಐಆರ್‌ಬಿ ಮುನಿರಾಬಾದ್, ಎಂ.ಜಿ ಪಂಪಾಪತಿ-ಎಸಿಪಿ ಮಾರತ್ತಹಳ್ಳಿ ಉಪ ವಿಭಾಗ, ಎಚ್.ಎನ್.ಧರ್ಮೇಂದ್ರ-ಎಸಿಪಿ ವಿಜಯನಗರ ಉಪ ವಿಭಾಗ, ಎಸ್.ಟಿ. ಚಂದ್ರಶೇಖರ್ ಡಿವೈಎಸ್ಪಿ ಸಿಐಡಿ-ಬೆಂಗಳೂರು, ಶಂಕರ್ ಎಂ. ರಾಗಿ ಎಸಿಪಿ ಉತ್ತರ ಉಪವಿಭಾಗ ಹುಬ್ಬಳ್ಳಿ ನಗರ.

ಸಿ.ಸಿದ್ದರಾಜು-ಡಿವೈಎಸ್ಪಿ ಎಸ್‌ಐಟಿ ಲೋಕಾಯುಕ್ತ, ಎ.ಜಿ ಕರಿಯಪ್ಪ-ಡಿವೈಎಸ್ಪಿ ಎಸ್‌ಐಟಿ ಕೆಎಲ್‌ಎ ಬೆಂಗಳೂರು, ಸಂಗಪ್ಪ ಎಸ್.ಹುಲ್ಲೂರು-ಡಿವೈಎಸ್ಪಿ ಕಲಬುರಗಿ, ಎ.ವಿ.ಲಕ್ಷ್ಮಿ ನಾರಾಯಣ-ಡಿವೈಎಸ್ಪಿ ಮಾಗಡಿ ಉಪ ವಿಭಾಗ ರಾಮನಗರ, ಬಿ.ಜಿ ಶಂಕರಪ್ಪ-ಪಿಐ ಸಿಐಡಿ, ಬಿ.ಎಸ್.ಸತೀಶ-ಪೊಲೀಸ್ ಇನ್ಸ್‌ಪೆಕ್ಟರ್ ಎಸಿಬಿ ಉಡುಪಿ, ಬಾಬುಸಿಂಗ್ ಎಚ್.ಕಿತ್ತೂರು-ಪಿಎಸ್ಸೈ ಎಫ್‌ಪಿಯು ಹುಬ್ಬಳ್ಳಿ-ಧಾರವಾಡ.

ಕೆ.ವೆಂಕಟೇಶ್-ಎಎಸ್ಸೈ ಬಸವನಗುಡಿ ಸಂಚಾರ ಠಾಣೆ ಬೆಂಗಳೂರು, ಎಸ್.ಸುಕುಮಾರ್-ಎಎಸ್ಸೈ ಚಿಕ್ಕಮಗಳೂರು ಗ್ರಾಮಾಂತರ ಠಾಣೆ, ರಾಜಕುಮಾರ- ಎಆರ್‌ಎಸ್‌ಐ ಡಿಎಆರ್ ಮೈಸೂರು, ಪಿ.ಎಸ್.ಶಿವಕುಮಾರ್-ಮುಖ್ಯಪೇದೆ, ಗುಪ್ತದಳ, ಜಿ.ಸಿ.ನಂಜುಂಡಯ್ಯ-ಮುಖ್ಯಪೇದೆ ಗುಪ್ತದಳ, ಆರ್.ರಂಗನಾಥ-ಎಚ್‌ಸಿ, ಎಸ್‌ಸಿಆರ್‌ಬಿ ಬೆಂಗಳೂರು.

ಗೃಹ ರಕ್ಷಕ ದಳ: ಗೃಹ ರಕ್ಷಕ ದಳದ ಎಸ್.ಮುರುಗೇಶ್-ಬೆಂಗಳೂರು, ಕೆ.ರಾಜ್‌ಪೀರ್-ಬಳ್ಳಾರಿ, ಹನುಮಂತರಾಯ ಈರಣ್ಣ ಇಳಗೇರ್-ಧಾರವಾಡ, ಡಾ. ಬಿ.ಎಚ್.ವೀರಪ್ಪ-ದಾವಣಗೆರೆ, ಐ.ಎ.ಕಮದೋಡ್-ಹಾವೇರಿ, ಹುಲ್ಲಣ್ಣಸಾ ಟಿ. ತುಳಸಿಕಟ್ಟಿ-ಕೊಪ್ಪಳ, ನಾಗೇಂದ್ರ ಬಾಬು ಎನ್.ಪಿ.-ಬೆಂಗಳೂರು ನಗರ ಇವರಿಗೆ ಗೃಹರಕ್ಷಕ ಹಾಗೂ ಪೌರ ರಕ್ಷಣಾ ಶ್ಲಾಘನೀಯ ಸೇವಾ ಪದಕ ಸಂದಿದೆ ಎಂದು ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News