ಮೈಸೂರು: 'ಫ್ರೀ ಕಾಶ್ಮೀರ್' ಭಿತ್ತಿಪತ್ರ ಪ್ರದರ್ಶಿಸಿದ್ದ ಯುವತಿಗೆ ಜಾಮೀನು

Update: 2020-01-27 15:28 GMT

ಮೈಸೂರು,ಜ.27: ಮೈಸೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ನಡೆದ ಪ್ರತಿಭಟನೆ ವೇಳೆ “ಫ್ರೀ ಕಾಶ್ಮೀರ್” ಭಿತ್ತಿ ಪತ್ರ ಪ್ರದರ್ಶನ ಪ್ರಕರಣದಲ್ಲಿ ರಾಷ್ಟ್ರದ್ರೋಹ ಆರೋಪ ಎದುರಿಸುತ್ತಿದ್ದ ಯುವತಿ ನಳಿನಿ ಹಾಗೂ ಮೈಸೂರು ವಿವಿ ಸಂಶೋಧಕರ ಸಂಘದ ಅಧ್ಯಕ್ಷ ಮರಿದೇವಯ್ಯ ಅವರಿಗೆ 2ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಇಬ್ಬರಿಗೂ 8 ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಲಾಗಿದೆ. 50 ಸಾವಿರ ರೂ. ಬಾಂಡ್, ಒಬ್ಬರು ಸ್ಯೂರಿಟಿ, ಒಂದು ತಿಂಗಳ ಒಳಗೆ ಪಾಸ್ ಪೋರ್ಟ್‍ನ್ನು ಪೊಲೀಸ್ ವಶಕ್ಕೆ ನೀಡುವುದು. ತನಿಖಾಧಿಕಾರಿಗಳಿಗೆ ಸಹಕಾರ ನೀಡುವುದು. 15 ದಿನಕ್ಕೆ ಒಮ್ಮೆ ಬೆಳಗ್ಗೆ 10 ರಿಂದ 12 ಗಂಟೆ ವೇಳೆಗೆ ಪೊಲೀಸ್ ಠಾಣೆಗೆ ಭೇಟಿ ನೀಡಬೇಕು ಎಂದು ನ್ಯಾಯಾಲಯ ಸೂಚಿಸಿದೆ. ಈ 8 ಷರತ್ತುಗಳನ್ವಯ ಇಬ್ಬರಿಗೂ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.

ನಳಿನಿ ಪರವಾಗಿ ಸಿ.ಎಸ್.ದ್ವಾರಕನಾಥ್ ಅವರ ತಂಡದ ವಕೀಲ ಜಗದೀಶ್, ಮಂಜುನಾಥ್, ಅಸ್ಮಪರ್ವೀನ್, ಅನೀಸ್ ಪಾಷ, ಜ.24 ಶುಕ್ರವಾರ ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News