ಭೂಸ್ಪರ್ಶದ ವೇಳೆ ಸ್ಕಿಡ್ ಆಗಿ ಹೆದ್ದಾರಿಗೆ ನುಗ್ಗಿದ ವಿಮಾನ

Update: 2020-01-28 06:45 GMT

ಟೆಹ್ರಾನ್: ಒಟ್ಟು 144 ಪ್ರಯಾಣಿಕರನ್ನು ಹೊತ್ತ ಇರಾನ್ ದೇಶದ ಹಳೆಯ ಪ್ಯಾಸೆಂಜರ್ ವಿಮಾನವೊಂದು ಸೋಮವಾರ ರನ್-ವೇಯಲ್ಲಿ ಇಳಿಯುವ  ವೇಳೆ ಸ್ಕಿಡ್ ಆಗಿ ಅಪಘಾತಕ್ಕೀಡಾಗಿ ವಿಮಾನ ನಿಲ್ದಾಣದ ಹತ್ತಿರದ ಪ್ರಮುಖ ಹೆದ್ದಾರಿಗೆ ನುಗ್ಗಿದ ಘಟನೆ ವರದಿಯಾಗಿದೆ.

ಇರಾನ್‍ನ ಖುಝೆಸ್ತಾನ್ ಪ್ರಾಂತ್ಯದ ಮಹಶಹರ್ ನಗರದಲ್ಲಿ ಈ ಘಟನೆ ನಡೆದಿದ್ದು ಕಾಸ್ಪಿಯನ್ ಏರ್ ಲೈನ್ಸ್‍ಗೆ ಸೇರಿದ ಈ ಮೆಕ್‍ಡೊನ್ನೆಲ್ ಡೌಗ್ಲಾಸ್ ಎಂಡಿ-83 ವಿಮಾನ ಅಪಘಾತದಲ್ಲಿ ಇಬ್ಬರು ಗಾಯಗೊಂಡಿದ್ದಾರೆ.

ಘಟನೆಯಿಂದ ಆಘಾತಗೊಂಡ ವಿಮಾನದ ಪ್ರಯಾಣಿಕರು ಕಾಕ್ ಪಿಟ್ ಸಮೀಪದ  ಹಾಗೂ ವಿಮಾನದ ರೆಕ್ಕೆಯ ಸಮೀಪದ ಇನ್ನೊಂದು ಬಾಗಿಲಿನಿಂದ ಹೊರಬಂದರು.

ಟೆಹ್ರಾನ್‍ನಿಂದ ಹೊರಟಿದ್ದ ಈ ವಿಮಾನದ ಎಲ್ಲಾ ಪ್ರಯಾಣಿಕರೂ ಸುರಕ್ಷಿತರಾಗಿದ್ದಾರೆ ಎಂದು  ವಿಮಾನ ನಿಲ್ದಾಣದ ನಿರ್ದೇಶಕರು ತಿಳಿಸಿದ್ದಾರೆ.

ಅದೃಷ್ಟವಶಾತ್ ವಿಮಾನ ಹೆದ್ದಾರಿಗೆ ನುಗ್ಗಿದ ಸ್ಥಳದಲ್ಲಿ ವಾಹನಗಳು ಹಾಗೂ ಜನರಿರಲಿಲ್ಲ. ವಿಮಾನ ರನ್-ವೇ ಮುಟ್ಟಬೇಕೆನ್ನುವಷ್ಟರಲ್ಲಿ ಲ್ಯಾಂಡಿಂಗ್ ಗೇರ್ ಅನ್ನು ಕಳೆದುಕೊಂಡಿತ್ತೆನ್ನಲಾಗಿದೆ. ಇದು ಸುಮಾರು 25 ವರ್ಷ ಹಳೆಯ ವಿಮಾನವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News