ರಾಜಕಾರಣಿಗಳು, ಶ್ರೀಗಳು, ನಟರ ಹತ್ಯೆಗೆ ಬೆದರಿಕೆ ಪತ್ರ: ಕಾನೂನು ಕ್ರಮ ಕೈಗೊಳ್ಳಲು ಸಿಪಿಐ ಒತ್ತಾಯ

Update: 2020-01-28 17:47 GMT

ಬೆಂಗಳೂರು, ಜ.28: ರಾಜಕಾರಣಿಗಳು, ಶ್ರೀಗಳು, ನಟರು ಹಾಗೂ ಪ್ರಗತಿಪರ ಚಿಂತಕರ ವಿರುದ್ಧ ಹತ್ಯೆ ಬೆದರಿಕೆ ಬಂದಿರುವುದನ್ನು ಖಂಡಿಸಿರುವ ಭಾರತ ಕಮ್ಯೂನಿಸ್ಟ್ ಪಕ್ಷ(ಸಿಪಿಐ), ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.

ಮಂಗಳವಾರ ಪ್ರೆಸ್‌ಕ್ಲಬ್‌ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಪಿಐ ಕಾರ್ಯದರ್ಶಿ ಯು.ಬಸವರಾಜು, ಇತ್ತೀಚೆಗೆ ನಿಜಗುಣಾನಂದ ಸ್ವಾಮೀಜಿ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಿಪಿಐ ಸದಸ್ಯ ಬೃಂದಾ ಕಾರಟ್, ನಟ ಪ್ರಕಾಶ್‌ರಾಜ್ ಮತ್ತು ಚೇತನ್ ಸೇರಿದಂತೆ 15 ಮಂದಿಯನ್ನು ಹತ್ಯೆ ಮಾಡುವುದಾಗಿ ಅನಾಮಧೇಯ ಪತ್ರ ಬಂದಿದೆ. ನಿಜಗುಣಾನಂದ ಶ್ರೀಗಳಿಗೆ ಪತ್ರ ಬಂದಿದ್ದು, ಯಾರನ್ನೆಲ್ಲ ಹತ್ಯೆ ಮಾಡುತ್ತೇವೆ ಎಂಬುದನ್ನು ಪಟ್ಟಿ ಸಮೇತ ಪತ್ರದಲ್ಲಿ ತಿಳಿಸಲಾಗಿದೆ. ಇದು ಅಭಿವ್ಯಕ್ತಿ ಸ್ವಾತಂತ್ರದ ಮೇಲೆ ಮಾಡಿರುವ ದಾಳಿಯಾಗಿದೆ ಎಂದು ತಿಳಿಸಿದರು.

ಹತ್ಯೆ ಪಟ್ಟಿಯಲ್ಲಿರುವ ನಾಯಕರು ಸಿಎಎ, ಎನ್‌ಪಿಆರ್ ಮತ್ತು ಎನ್‌ಆರ್‌ಸಿ ಕಾಯ್ದೆ ವಿರುದ್ಧ ಹೋರಾಡಿದವರಾಗಿದ್ದಾರೆ. ಇದೀಗ ಅವರನ್ನೇ ಗುರಿಯಾಗಿಸಿಕೊಂಡು ಪತ್ರ ಬರೆಯಲಾಗಿದೆ. ಸರಕಾರ ಹಾಗೂ ಪೊಲೀಸ್ ಇಲಾಖೆ ಪ್ರಕರಣ ಗಂಭೀರವಾಗಿ ಪರಿಗಣಿಸಿ ಪತ್ರ ಬರೆದವರಾರು, ಎಲ್ಲಿಂದ ಬಂದಿದೆ, ತಪ್ಪಿತಸ್ಥರು ಯಾರೆಂದು ತನಿಖೆ ಮಾಡಬೇಕು. ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಈ ಕುರಿತು ಸಿಪಿಐ ರಾಜ್ಯ ಸಮಿತಿ ಕಾರ್ಯದರ್ಶಿ ನಿತ್ಯಾನಂದಸ್ವಾಮಿ ನೇತೃತ್ವದಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಲಾಗಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News