ನಕಲಿ ಖೋಟಾ ಚಲಾವಣೆ ದಂಧೆ: 3.66 ಲಕ್ಷ ರೂ. ಮೌಲ್ಯದ ನೋಟುಗಳು ಜಪ್ತಿ

Update: 2020-01-28 18:02 GMT

ದಾವಣಗೆರೆ, ಜ.28: ಸಂತೆ, ಜಾತ್ರೆಗಳಲ್ಲಿ ಗ್ರಾಮೀಣ ಜನರಿಗೆ ನಕಲಿ ಖೋಟಾ ನೀಡಿ ಸಾರ್ವಜನಿಕರನ್ನು ವಂಚಿಸುತ್ತಿದ್ದ ಜಾಲವೊಂದನ್ನು ಜಿಲ್ಲೆಯ ಪೊಲೀಸರು ಪತ್ತೆ ಹಚ್ಚಿದ್ದು, ಅವರಿಂದ 500, 2000 ಸಾವಿರ ಮುಖ ಬೆಲೆಯ 3,66,200 ರೂ. ನಕಲಿ ಖೋಟಾ ನೋಟು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದರು.  

ಹರಪನಹಳ್ಳಿಯ ಹಲುವಾಗಲು ಗ್ರಾಮದ ಹನುಮಂತ, ಅರಸನಾಳು ಹಾಲೇಶ್, ಮಡಿವಾಳ ಮಂಜಪ್ಪ, ಸಂತೋಷ, ಚಂದ್ರಪ್ಪ, ಅರಸನಾಳು ಗ್ರಾಮದ ಉದಯ, ಸಂತೋಷ, ನೀಲುಗಂದ ಗ್ರಾಮದ ನಿಂಗಪ್ಪ, ಕೃಷ್ಣಪ್ಪ, ವೆಂಕಟೇಶ್, ಪುಟ್ಟಪ್ಪ ಬಂಧಿತರು. ಮತ್ತೂರು ಗ್ರಾಮದ ನಾಗನಗೌಡ ತಲೆ ಮರೆಸಿಕೊಂಡಿದ್ದಾರೆ.

ಈ ಪ್ರಕರಣದಲ್ಲಿ ತಂದೆ ಪುಟ್ಟಪ್ಪ, ಮಗ ವೆಂಕಟೇಶ್ ರನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೇ ಈ ಹಿಂದೆ ಬೆಂಗಳೂರನಲ್ಲಿ 2013 ರಲ್ಲಿ ಖೋಟಾ ನೋಟು ಚಲಾವಣೆಯಲ್ಲಿ ಪ್ರಕರಣದಲ್ಲಿದ್ದ ಪುಟ್ಟಪ್ಪ (75) ಆರೋಪಿಯಾಗಿರುವ ಮಾಹಿತಿಯಿದೆ. ಪ್ರಕರಣ ತನಿಖೆ ಕೈಗೊಳ್ಳಲಾಗಿದೆ. ಬಂಧಿತರಿಂದ ಎರಡು ಕಲರ್ ಪ್ರಿಂಟರ್ ಯಂತ್ರ, ಜೆಲ್ ಪೆನ್ನು, ಟೇಪ್, ಸ್ಕೇಲ್ ಕಟ್ಟರ್ ಹಾಗೂ ಕೃತ್ಯಕ್ಕೆ ಬಳಸಿದ ಗೂಡ್ಸ್ ಆಟೋವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.  

ಕಲರ್ ಪ್ರಿಂಟರ್ ಸಹಾಯದೊಂದಿಗೆ 100, 500, 2000 ರೂ. ಮುಖಬೆಲೆಯ ನೋಟುಗಳನ್ನು ಎಕ್ಸ್ಎಲ್ ಬಾಂಡ್ ಪೇಪರನಲ್ಲಿ ಉಪಯೋಗಿಸಿ ಕಲರ್ ಜೆರಾಕ್ಸ್ ಮಾಡಿ ಜನರಿಗೆ ಚಲಾವಣೆ ಮಾಡುತ್ತಿದ್ದರು. ಜ.26 ರಂದು ಲೋಲೇಶ್ವರ ಗ್ರಾಮದಲ್ಲಿ ಚಲಾವಣೆ ಮಾಡಲು ಪ್ರಯತ್ನಿಸಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಮುಂದಿನ ತನಿಖೆಗೆ ಸಿಇಎನ್ ಠಾಣೆಗೆ ಈ ಪ್ರಕರಣ ವಹಿಸಲಿದ್ದೇವೆ ಎಂದರು. 

ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಲೋಲೇಶ್ವರ ಗ್ರಾಮದ ಸಾರ್ವಜನಿಕರಿಗೆ ಹಾಗೂ ಇಡೀ ಪ್ರಕರಣವನ್ನು ಪತ್ತೆ ಹಚ್ಚಿದ ಸಿಬ್ಬಂದಿಗಳನ್ನು ಇದೇ ವೇಳೆ ಸನ್ಮಾನಿಸಲಾಯಿತು. 

ಈ ವೇಳೆ ಎಎಸ್ಪಿ ರಾಜೀವ್, ಡಿವೈಎಸ್‍ಪಿ ಮಲ್ಲೇಶ್ ದೊಡ್ಡಮನಿ, ವೃತ್ತ ನಿರೀಕ್ಷಕ ಕುಮಾರ್ ಕೆ, ಪಿಎಸ್‍ಐ ಪ್ರಕಾಶ್ ಸೇರಿದಂತೆ ಇತರರು ಇದ್ದರು. 

ಸುಪ್ರೀಕೋರ್ಟ್ ಆದೇಶ ಪ್ರಕಾರ ಪ್ರತಿಯೊಂದು ಠಾಣೆಯಲ್ಲೂ ಕಾಣಿಯಾದ ವ್ಯಕ್ತಿಗಳ ಪ್ರಕರಣಗಳಿಗೆ ಹೆಚ್ಚಿನ ಆದ್ಯತೆಯಲ್ಲಿ ತನಿಖೆ ನಡೆಸಬೇಕಿದೆ. ಮಹಿಳೆಯರು, ಹುಡುಗಿಯರು ಕಾಣಿಯಾದ ಪ್ರಕರಣಗಳಿಗೆ ಒತ್ತು ನೀಡಬೇಕೆಂದು ಸೂಚನೆ ನೀಡಿದೆ. ಅದರಂತೆ ಇತ್ತೀಚೆಗೆ ಕಾಣೆಯಾದ ತಾಯಿ -ಮಗಳು ಗೋವಾದಲ್ಲಿ ದೊರೆತಿದ್ದಾರೆ ಎಂದು ಮಾಹಿತಿ ನೀಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News