ಗುಂಡು ಹಾರಿಸಿದ ದುಷ್ಕರ್ಮಿಯನ್ನು 'ಜಾಮಿಯಾ ಪ್ರತಿಭಟನಕಾರ' ಎಂದ ರಿಪಬ್ಲಿಕ್ ಟಿವಿ!

Update: 2020-01-30 16:30 GMT

ಹೊಸದಿಲ್ಲಿ: ಜಾಮಿಯಾ ಮಿಲ್ಲಿಯಾ ವಿವಿ ಆವರಣದಲ್ಲಿ ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆ ನಡೆಯುತ್ತಿದ್ದ ವೇಳೆ ದುಷ್ಕರ್ಮಿಯೊಬ್ಬ ಗುಂಪಿಗೆ ನುಗ್ಗಿ ಗುಂಡಿನ ದಾಳಿ ನಡೆಸಿದ್ದ. ಗುಂಡಿನ ದಾಳಿ ನಡೆಸಿದ ದುಷ್ಕರ್ಮಿಯ ಹೆಸರು ರಾಮ್ ಭಗತ್ ಗೋಪಾಲ್ ಶರ್ಮಾ ಎಂದು ಪೊಲೀಸರು ಈಗಾಗಲೇ ತಿಳಿಸಿದ್ದಾರೆ.

ಗುಂಪಿಗೆ ನುಗ್ಗಿದ ದುಷ್ಕರ್ಮಿ 'ಆಝಾದಿಯನ್ನು ತೆಗೆದುಕೊಳ್ಳಿ , ಹಿಂದೂಸ್ತಾನ್ ಝಿಂದಾಬಾದ್, ದಿಲ್ಲಿ ಪೊಲೀಸ್ ಝಿಂದಾಬಾದ್' ಎಂದು ಕೂಗುತ್ತಾ ಗುಂಡಿನ ದಾಳಿ ನಡೆಸಿದ್ದ. ಗುಂಡಿನ ದಾಳಿ ನಡೆಸಿದ್ದಾತ ಸಿಎಎ ವಿರೋಧಿ ಪ್ರತಿಭಟನಕಾರರ ಬಗ್ಗೆ ದ್ವೇಷ ಭಾವನೆಯನ್ನು ಹೊಂದಿದ್ದ ಎನ್ನುವುದು ಆತನ ಫೇಸ್ ಬುಕ್ ಪೋಸ್ಟ್ ಗಳಿಂದಲೇ ತಿಳಿದುಬಂದಿದೆ. ಆದರೆ ಈ ಗುಂಡಿನ ದಾಳಿಯನ್ನು ನಡೆಸಿದ್ದು ಸಿಎಎ ವಿರೋಧಿ ಪ್ರತಿಭಟನಕಾರರು ಎಂದು ರಿಪಬ್ಲಿಕ್ ಟಿವಿ ವರದಿ ಮಾಡಿದ್ದು, ಈ ಖಾಸಗಿ ಚಾನೆಲ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

"ಸಿಎಎ ವಿರುದ್ಧದ ಪ್ರತಿಭಟನೆಯ ಹೆಸರಿನಲ್ಲಿ ಬಂದೂಕುಗಳನ್ನು ಝಳಪಿಸಲಾಗುತ್ತಿದೆ. ರಾಜಧಾನಿಯಲ್ಲಿ ಏನು ನಡೆಯುತ್ತಿದೆ. ರಾಹುಲ್ ಗಾಂಧಿ ಮತ್ತು ಅರವಿಂದ್ ಕೇಜ್ರಿವಾಲ್ ಇದನ್ನು ಬೆಂಬಲಿಸುತ್ತಿದ್ದಾರೆ" ಎಂದು ರಿಪಬ್ಲಿಕ್ ಟಿವಿಯ ಪತ್ರಕರ್ತರೊಬ್ಬರು ವರದಿ ಮಾಡಿದ್ದರೆ, ಚಾನೆಲ್ ನಲ್ಲಿ 'ಜಾಮಿಯಾ ಪ್ರತಿಭಟನಕಾರರು ಗನ್ ಬಳಸುತ್ತಿದ್ದಾರೆ' ಎಂದು ಪ್ರಕಟಿಸಲಾಗಿದೆ.

ಆದರೆ ಈ ವರದಿ ಸುಳ್ಳಾಗುತ್ತಲೇ ರಿಪಬ್ಲಿಕ್ ಟಿವಿ ಸುಮ್ಮನಾಗಿದೆ. ಆದರೆ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಟ್ವಿಟರಿಗರು , ಇದು ಅತ್ಯಂತ ಕೀಳುಮಟ್ಟ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News