ಇಟಲಿ ಹಡಗಿನಲ್ಲಿ 7,000 ಪ್ರವಾಸಿಗರು ಬಂಧಿ

Update: 2020-01-30 17:36 GMT

ಸಿವಿಟವೆಚಿಯ (ಇಟಲಿ), ಜ. 30: ಇಟಲಿಯಲ್ಲಿ ಪ್ರವಾಸಿ ಹಡಗೊಂದರಲ್ಲಿ ಎರಡು ಶಂಕಿತ ಕೊರೋನವೈರಸ್ ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಹಡಗಿಗೆ ಬೀಗಮುದ್ರೆ ಹಾಕಲಾಗಿದೆ ಹಾಗೂ ಅದರಲ್ಲಿರುವ ಸುಮಾರು 7,000ಕ್ಕೂ ಅಧಿಕ ಪ್ರವಾಸಿಗರು ಅತಂತ್ರರಾಗಿದ್ದಾರೆ.

ಜ್ವರದಿಂದ ಬಳಲುತ್ತಿದ್ದ ಮಹಿಳೆಯೊಬ್ಬರಿಗೆ ಚಿಕಿತ್ಸೆ ನೀಡುವುದಕ್ಕಾಗಿ ಸಿವಿಟವೆಚಿಯ ಬಂದರಿನಲ್ಲಿ ತಂಗಿರುವ ‘ಕೋಸ್ಟ ಕ್ರೋಶಿಯರ್’ ಹಡಗಿನ ಒಳಗೆ ಮೂವರು ವೈದ್ಯರು ಮತ್ತು ಓರ್ವ ನರ್ಸ್ ತೆರಳಿದರು. ಬಳಿಕ ಚೀನಿ ದಂಪತಿಯ ಮಾದರಿಗಳನ್ನು ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ಸ್ಥಳೀಯ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಮಕಾವುನ 54 ವರ್ಷದ ಮಹಿಳೆ ಮತ್ತು ಅವರ ಸಂಗಾತಿಯನ್ನು ಬುಧವಾರ ರಾತ್ರಿ ಹಡಗಿನಲ್ಲಿರುವ ಆಸ್ಪತ್ರೆಯ ಪ್ರತ್ಯೇಕಿತ ಸ್ಥಳದಲ್ಲಿ ಇರಿಸಲಾಗಿದೆ ಹಾಗೂ ಆರೋಗ್ಯ ಸಚಿವಾಲಯ ನೀಡಿರುವ ಸೂಚನೆಗಳನ್ನು ಪಾಲಿಸಲಾಗುತ್ತಿದೆ ಎಂದು ಹಡಗು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News