ಕೋಲಾರ: ಸಿಎಎ, ಎನ್‌ಆರ್‌ಸಿ ವಿರೋಧಿಸಿ ವಿವಿಧ ಸಂಘಟನೆಗಳಿಂದ ಮಾನವ ಸರಪಳಿ

Update: 2020-01-30 18:35 GMT

ಕೋಲಾರ,ಜ.30: ಸಿಎಎ, ಎನ್‌ಆರ್‌ಸಿ, ಎನ್ ಪಿಆರ್ ವಿರೋಧಿಸಿ ವಿವಿಧ ಜನಪರ ಸಂಘಟನೆಗಳಿಂದ ಮಹಾತ್ಮ ಗಾಂಧೀಜಿ ವನದಿಂದ ಮಾನವ ಸರಪಳಿಯನ್ನು ನಿರ್ಮಿಸಿ ಪ್ರತಿಭಟನೆ ನಡೆಸಲಾಯಿತು. 

ಸಾವಿರಾರು ಸಂಖ್ಯೆಯಲ್ಲಿ ಯುವಕರು, ವಿದ್ಯಾರ್ಥಿಗಳು, ಮಹಿಳೆಯರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮಾನವ ಸರಪಳಿಯಲ್ಲಿ ಭಾಗವಹಿಸಿದ್ದರು. ಬಂಡಾಯ ಸಾಹಿತಿ ಲಕ್ಷ್ಮೀಪತಿ ಕೋಲಾರ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಚಾಲನೆ ನೀಡಿದರು. 

ಇದೇ ವೇಳೆ ಮಾತನಾಡಿದ ಅವರು ಶಾಂತಿ ಮತ್ತು ಅಹಿಂಸೆ ಪ್ರತಿಪಾದಕ ಮಹಾತ್ಮ ಗಾಂಧೀಜಿಯವರ ಹುತಾತ್ಮ ದಿನವಾದ ಜ. 30 ರಂದು ಸಂವಿಧಾನದ ಮೂಲ ಆಶಯದ ವಿರುದ್ಧದ ನಿಲುವಿನ ಕೇಂದ್ರದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಮಾನವ ಸರಪಳಿಯನ್ನು ನಿರ್ಮಿಸಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು. 

ಪ್ರತಿ‌ಭಟನೆಯಲ್ಲಿ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ವಿ. ಗೀತಾ, ಹಿರಿಯ ದಲಿತ ಮುಖಂಡ ಎಚ್. ಎಂ. ರಾಮಚಂದ್ರ, ಸಿಪಿಎಂ ಮುಖಂಡ ಗಾಂಧಿನಗರ ನಾರಾಯಣಸ್ವಾಮಿ, ಎಸ್.ಎಫ್.ಐ ರಾಜ್ಯ ಉಪಾಧ್ಯಕ್ಷ ವಾಸುದೇವರೆಡ್ಡಿ, ಭೀಮಸೇನೆ ರಾಜ್ಯಾಧ್ಯಕ್ಷ  ಪಂಡಿತ್ ಮುನಿವೆಂಕಟಪ್ಪ,  ಜನಾಧಿಕಾರ ಸಂಘಟನೆ ಜಿಲ್ಲಾ ಮುಖಂಡರಾದ ಮಂಜುಳ ಆರ್. ಮಾನವ ಹಕ್ಕುಗಳ ಹೋರಾಟಗಾರ ಸಿ.ವಿ ನಾಗರಾಜ್, ನಗರಸಭಾ ಮಾಜಿ ಸದಸ್ಯರಾದ ಅಬ್ದುಲ್ ಖಯ್ಯೂಂ, ಸಲಾವುದ್ಧೀನ್ ಬಾಬು, ಕಾರ್ಮಿಕ ಮುಖಂಡ ಪಿ. ಸಿ. ಶ್ರೀನಿವಾಸನ್, ವಿಜಯಕೃಷ್ಣ, ರೈತ ಮುಖಂಡ ಅಬ್ಬಣಿ ಶಿವಪ್ಪ,  ನಳಿನಿಗೌಡ, ಟಿ.ಎಂ. ವೆಂಕಟೇಶ್, ಡಿವೈಎಫ್ಐ ತಂಗರಾಜ್, ಜೆಎಂಎಸ್ ವಿಜಯಲಕ್ಷ್ಮಿ, ಕೊಂಡರಾಜನಹಳ್ಳಿ ಮಂಜುಳ, ಟಿಪ್ಪು ಸೆಕ್ಯುಲರ್ ಸೇನೆಯ ಆಸಿಫ್ ಪಾಷಾ, ತಬರೇಸ್, ಮುಂತಾದವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News