×
Ad

'ಆಪರೇಷನ್ ಕಮಲ'ದ ಹಿಂದೆ ಯಾರ್ಯಾರಿದ್ದರು ಎಂಬುದನ್ನು ತಿಳಿಸುತ್ತೇನೆ: ಎಚ್.ವಿಶ್ವನಾಥ್

Update: 2020-01-31 19:56 IST

ಮೈಸೂರು, ಜ.31: ಅಪರೇಷನ್ ಕಮಲ ಪುಸ್ತಕ ಬರೆಯುತ್ತೇನೆ. ಅಪರೇಷನ್ ಕಮಲದ ಹಿಂದೆ ಯಾರ್ಯಾರಿದ್ದರು ಎಂಬುದನ್ನು ಪುಸ್ತಕದಲ್ಲಿ ತಿಳಿಸುತ್ತೇನೆ ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಹೇಳಿದ್ದಾರೆ.

ಮೈಸೂರಿನಲ್ಲಿ ಇಂದು ಮಾಧ್ಯಮದ ಜತೆ ಮಾತನಾಡಿದ ಹೆಚ್.ವಿಶ್ವನಾಥ್, ಅಪರೇಷನ್ ಕಮಲ ಕುರಿತು ಪುಸ್ತಕ ಬರೆಯುತ್ತೇನೆ. ಈಗಾಗಲೇ ಎಲ್ಲವನ್ನೂ ದಾಖಲಿಸಿದ್ದೇನೆ. ಅದಕ್ಕೆ ರೂಪಕೊಡುವುದು ಒಂದು ಬಾಕಿ ಇದೆ. ಪುಸ್ತಕದಲ್ಲಿ ಸಮ್ಮಿಶ್ರ ಸರ್ಕಾರದ ಪತನದ ಬೆಳವಣಿಗೆ ದಾಖಲಿಸುತ್ತೇನೆ. ಅಪರೇಷನ್ ಕಮಲ ವಿಚಾರದಲ್ಲಿ ಬಿಜೆಪಿಯವರು ಮಾತ್ರ ಅಲ್ಲ ಕಾಂಗ್ರೆಸ್ ನವರು ಇದ್ದಾರೆ. ಎಲ್ಲಾ ವಿಚಾರವನ್ನು ಪುಸ್ತಕದ ಮೂಲಕ ಹೊರತರುತ್ತೇನೆ. ಮುಂಬೈಗೆ ಹೋಗಿದ್ದು, ಕೊಲ್ಕತ್ತಾಗೆ ಹೋಗಿದ್ದು ಎಲ್ಲವನ್ನು ಉಲ್ಲೇಖಿಸುತ್ತೇನೆ ಎಂದು ತಿಳಿಸಿದರು.

ನನಗೆ ಯಾವುದೇ ಪಕ್ಷ ಗೊತ್ತಿಲ್ಲ, ಹೈಕಮಾಂಡ್ ಗೊತ್ತಿಲ್ಲ, ನನಗೆ ಗೊತ್ತಿರೋದು ಮುಖ್ಯಮಂತ್ರಿ ಯಡಿಯೂರಪ್ಪ. ಅವರು ಕಾಲದ ಧ್ವನಿಯಾಗಬೇಕು. ವರಿಷ್ಠರ, ಪಕ್ಷದ ಧ್ವನಿಯಾಗಬಾರದು. ಬಿ.ಎಸ್.ಯಡಿಯೂರಪ್ಪ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾರೆ. ಅವರ ಮಾತು ಸದಾಕಾಲ ಉಳಿಯುತ್ತದೆ. ರಾಜಕೀಯದಲ್ಲಿ ಕಾಣುವ ಕೈಗಳಿಗಿಂತ ಕಾಣದ ಕೈಗಳು ಜಾಸ್ತಿ ಎಂದು ಹೆಚ್.ವಿಶ್ವನಾಥ್ ನುಡಿದರು.

ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಆಗಲೇಬೇಕು. ಇಲ್ಲದಿದ್ದರೆ ರಾಜ್ಯದ ಅಭಿವೃದ್ಧಿ ಕುಂಠಿತವಾಗುತ್ತದೆ ಎಂದ ಅವರು, ಮಂತ್ರಿಯಾಗದಿದ್ದರೆ ನಾವು ಉಳಿಯುವುದಿಲ್ಲವಾ ಎಂದು ಎಚ್.ವಿಶ್ವನಾಥ್ ಮಾಧ್ಯಮದವರನ್ನು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News